ಮೈಸೂರಿನಲ್ಲಿ ಕಾಲೇಜುಗಳನ್ನು ಬಂದ್ ಮಾಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D K SHIVKUMAR) ಆಕ್ಷೇಪ ವ್ಯಕ್ತಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಾವೇರಿ (HAVERI) ತಾಲೂಕಿನ ನೆಗಳೂರು ಗ್ರಾಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ (B.C PATIL ) ಪ್ರತಿಕ್ರಿಯೆ ನೀಡಿದ್ದಾರೆ.
ಕಾಲೇಜ್ ಇದ್ದರೂ ಅಷ್ಟೆ, ಇರದಿದ್ದರೂ ಅಷ್ಟೆ. ಮುಂಜಾಗ್ರತಾ ಕ್ರಮವಾಗಿ ಆ ವ್ಯವಸ್ಥೆ ಮಾಡಿದ್ದಾರೆ. ಸಿದ್ದರಾಮಯ್ಯ (SIDDARAMAIAH )ಬೆಳಿಗ್ಗೆಯಿಂದ ಸಂಜೆವರೆಗೆ ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಅಂತಾ ಏನೋ ಹೇಳಿಕೊಂಡು ಹೋಗುತ್ತಾರೆ. ಅವಕ್ಕೆಲ್ಲ ಉತ್ತರ ಕೊಡಬೇಕಾ.?ಈಗ ಕೊರೊನಾದ ಬಗ್ಗೆ ಸರಕಾರ ಎಲ್ಲೂ ಕೂಡ ಕಾರ್ಯಕ್ರಮಗಳನ್ನು ನಿಷೇಧ ಮಾಡಿಲ್ಲ. ಇದನ್ನು ಓದಿ :- ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ – ಯಲಹಂಕ ವಾಯುನೆಲೆಯಲ್ಲಿ ಸಿಎಂ ಬೊಮ್ಮಾಯಿ ಸ್ವಾಗತ
ಕಾರ್ಯಕ್ರಮಗಳು ನಡೆಯುತ್ತಿವೆ. ಕಾಂಗ್ರೆಸ್ (CONGRESS) ನವರು ಬಿಜೆಪಿ ಕಾರ್ಯಕ್ರಮಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾರದವರು. ಹೀಗಾಗಿ ದಿನಾ ಏನಾದರೊಂದು ಹೇಳಿಕೊಂಡು ಹೋಗುತ್ತಾರೆ. ಅಗ್ನಿಪಥ್ (AGNIPATH) ಯೋಜನೆಯನ್ನು ರಾಜಕೀಯ ಮಾಡಲಾಗುತ್ತಿದೆ. ಯುವಕರಿಗೆ 4 ವರ್ಷದ ನಂತರ 23 ಲಕ್ಷ ಸಿಗುತ್ತದೆ. ಯುವ ಶಕ್ತಿಯನ್ನು ದೇಶದ ರಕ್ಷಣೆಗಾಗಿ ಬಳಸಿಕೊಂಡರೆ ತಪ್ಪೇನು.? ಇದು ಉತ್ತಮವಾದ ಕೆಲಸ.
ಇದನ್ನು ಸಹಿಸಲಾರದೆ ಕಾಂಗ್ರೆಸ್ ನವರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ದೇಶ ಕಾಯಬೇಕು, ದೇಶ ರಕ್ಷಣೆ ಮಾಡಬೇಕು ಅನ್ನೋದು ಮಿಲಿಟರಿಗೆ ಸೇರಬೇಕು ಅನ್ನೋ ಯುವಕರ ಉದ್ದೇಶ. ದೇಶ ಕಾಯಬೇಕು ಅನ್ನೋರು ಯಾರಾದರೂ ಬಸ್ಸಿಗೆ, ಟ್ರೇನ್ ಗೆ ಬೆಂಕಿ ಹಚ್ಚುತ್ತಾರಾ? ಇದೆಲ್ಲ ದುರುದ್ದೇಶದಿಂದ ಕಾಂಗ್ರೆಸ್ ಪಿತೂರಿಯಿಂದ ಈ ಕೆಲಸ ನಡೆಯುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ರು.
ಇದನ್ನು ಓದಿ :- ಕನ್ನಡದಲ್ಲಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ