ಮೈಸೂರಿನಲ್ಲಿ (Mysuru) ಇತಿಹಾಸ, ಪರಂಪರೆ ಒಂದೊಂದು ಕಲ್ಲಿನಲ್ಲೂ ಸಿಗುತ್ತೆ. ಅದಕ್ಕಾಗಿಯೇ ಮೈಸೂರಿನಲ್ಲಿ ಯೋಗ ಮಾಡಲು (Yoga) ಆಯ್ಕೆ ಮಾಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra modi) ಮೈಸೂರಿನಲ್ಲಿ ತಿಳಿಸಿದ್ದಾರೆ.
ಮೈಸೂರು ಹಾಗೂ ಕರ್ನಾಟಕದ (Karnataka ) ನಾಗರಿಕ ಬಂಧುಗಳಿಗೆ ನನ್ನ ಪ್ರೀತಿಯ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ (Kannada speech) ಆರಂಭಿಸಿದ ಪ್ರಧಾನಿ ಮೋದಿ ಕೋಟಿ ಕೋಟಿ ಜನರು ಈ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದಾರೆ. ನಾಲ್ವಡಿ ಒಡೆಯರ್ (Nalvadi odeyar) , ಸರ್.ಎಂ.ವಿಶ್ವೇಶ್ವರಯ್ಯ ಜೀ (Sir M.Vishveshwaraya) ಅವರ ಪುಣ್ಯವಂತರಿದ್ದಾರೆ ಎಂದು ಮೋದಿ ಮೈಸೂರು ಇತಿಹಾಸವನ್ನ ಕೊಂಡಾಡಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಕರ್ನಾಟದಲ್ಲಿದೆ, ಎಲ್ಲ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೇಳಿದ್ರು.
ಕರ್ನಾಟಕದ 39 ಲಕ್ಷ ಜನರಿಗೆ ಆಯುಷ್ಮಾನ್ ಯೋಜನೆಯ (Ayush scheme) ಪ್ರಯೋಜನ ಸಿಗ್ತಿದೆ. ಡಬಲ್ ಎಂಜಿನ್ ಸರ್ಕಾರದಿಂದಲೇ ಈ ಅಭಿವೃದ್ಧಿ ಆಗ್ತಿದೆ ಎಂದು ಹೇಳಿದ್ರು. ಕಿಸಾನ್ ಸಮ್ಮಾನ್ (Kisan sanman) ಯೋಜನೆಯಿಂದಲೂ ಲಾಭ ಸಿಗ್ತಿದೆ. ಸುಮಾರು 56 ಸಾವಿರ ಜನರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದ್ರು. ದೇಶದ ಆರ್ಥಿಕ, ಆಧ್ಯಾತ್ಮಿಕ ನಾಡು ಕರ್ನಾಟಕ ಎಂದು ಮೋದಿ ಕೊಂಡಾಡಿದ್ರು. ಇದನ್ನೂ ಓದಿ : – ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಗ್ಯಾನ ಗೌಡರ್ ಕುಟುಂಬಕ್ಕೆ ಮೋದಿಯಿಂದ ಸಾಂತ್ವನ
ಮೋದಿ ಕೊಂಡಾಡಿದ ಬೊಮ್ಮಾಯಿ
ಇದಕ್ಕೂ ಮೊದಲು ಮಾತನಾಡಿದ ಸಿಎಂ ಬೊಮ್ಮಾಯಿ (Bommai) ಮೈಸೂರು ಅಂದ್ರೆ ಮೋದಿ ಅವ್ರಿಗೆ ಬಹಳ ಪ್ರೀತಿ. ಯೋಗ ದಿನಾಚರಣೆಯಂದು ಮೈಸೂರಿಗೆ ಬರಬೇಕು ಅನ್ನೋ ಇಚ್ಚೆ ಮೋದಿ ಅವ್ರಿಗೆ ಮೊದಲೇ ಇತ್ತು. ಹಲವಾರು ಕಾರಣಗಳಿಂದ ಬರಲು ಆಗಿರಲಿಲ್ಲ. ನಾವು ಈ ಬಾರಿ ಮೋದಿ ಅವ್ರನ್ನ ಅಹ್ವಾನ ಮಾಡಿದ್ದೇವು. ಈ ಬಾರಿ ಎಷ್ಟು ಮಳೆ ಆದ್ರೂ ಬರ್ತಿನಿ ಅಂತಾ ಹೇಳಿದ್ರು.
ಇದು ಮೈಸೂರು ಮೇಲಿನ ಮೋದಿ ಅವ್ರ ಪ್ರೀತಿ ತೋರಿಸುತ್ತದೆ ಎಂದು ತಿಳಿಸಿದ್ರು. ಹಿಂದಿನ ಪ್ರಧಾನಿಗಳಿಗೂ ಇಂದಿನ ಪ್ರಧಾನಿಗಳಿಗೂ ವ್ಯತ್ಯಾಸ ಇದೆ. ಮೋದಿ ಅವ್ರು ಜನರಿಗಾಗಿ ಆಡಳಿತ ಮಾಡಿದ್ರೆ, ಮೊದಲಿನವ್ರು ಅಧಿಕಾರಕ್ಕಾಗಿ ಆಡಳಿತ ಮಾಡಿದ್ರು. ಸ್ವಾತಂತ್ರ್ಯ ನಂತರದ ಭಾರತದಲ್ಲಿ ಅತಿ ಹೆಚ್ಚು ಜನೋಪಯೋಗಿ ಕೆಲಸ ಮಾಡಿದವರಲ್ಲಿ ನರೇಂದ್ರ ಮೋದಿ ಮೊದಲಿಗರು ಎಂದು ಕೊಂಡಾಡಿದ್ರು. ಇದನ್ನೂ ಓದಿ : – ಮೈಸೂರಿನಲ್ಲಿ ಮೋದಿಗಾಗಿ ಕಲಾವಿದನಿಂದ ವಿಶೇಷ ಪೇಟ..!