ಧಾರವಾಡದಲ್ಲಿ ನೀರಾವರಿ ಇಲಾಖೆ ವಿರುದ್ಧ ರೈತರ ಧರಣಿ

ಧಾರವಾಡ ನೀರಾವರಿ ಇಲಾಖೆಯ (Irrigation department) ಮೇಲೆ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ , ನೀರಾವರಿ ಇಲಾಖೆ ಕಚೇರಿಯ ಎದುರು ಕಳಸಾ ಬಂಡೂರಿ ಹೋರಾಟ ಸಮಿತಿಯ ರೈತರು (Farmers) ಧರಣಿ ಮುಂದುವರೆಸಿದ್ದಾರೆ.

ಈ ಇಲಾಖೆ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ. ಹೀಗಾಗಿಯೇ ಕಳಸಾ ಬಂಡೂರಿ ನಾಲಾ ಯೋಜನೆ (Nala project) ವಿಫಲವಾಗುತ್ತಿದೆ. ಈಗಾಗಲೇ ಯೋಜನೆಗೆ ಅನುಮೋದನೆ ಸಿಕ್ಕರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನೀರಾವರಿ ಕಚೇರಿ ಎದುರು ರೈತರ 2 ನೇ ದಿನದ ಪ್ರತಿಭಟನೆ ಆರಂಭವಾಗಿದೆ.

ಮಹಿಳಾ ರೈತ ಮುಖಂಡರು ರಂಗೋಲಿ ಬಿಡಿಸುವ ಮೂಲಕ ಧರಣಿ ನಡೆಸಿದ್ದಾರೆ. ನೀರಾವರಿ ಇಲಾಖೆಯ ಭ್ರಷ್ಟಾಚಾರ ಬಯಲಿಗೆಳೆಯಲು CBI ತನಿಖೆಗೆ ವಹಿಸುವಂತೆ ರೈತರು ಧರಣಿ ಮುಂದುವರೆಸಿದ್ದಾರೆ. ಇದನ್ನೂ ಓದಿ : –  ಚಿಕ್ಕಬಳ್ಳಾಪುರದಲ್ಲಿ ಅವ್ಯವಸ್ಥೆ ಆಗರವಾದ ಎಪಿಎಂಸಿ ಮಾರುಕಟ್ಟೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!