ಸೀಳುನಾಯಿಗಳ ದಾಳಿಗೆ ಹುಲಿ ಮರಿ (Tiger cub) ಸಾವಾಗಿರುವ ಘಟನೆ ಚಾಮರಾಜನಗರ (Chamarajnar) ಜಿಲ್ಲೆಯ ಬಂಡೀಪುರ (Bandipur) ಹುಲಿ ಪಿಚ್ಚಿಂಗ್ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಡೆದಿದೆ.
ಇದು ಸುಮಾರು ಒಂದು ವರ್ಷದ ಹುಲಿ ಮರಿ ಎಂದು ಅಂದಾಜಿಸಲಾಗಿದೆ. ಪಿಚ್ಚಿಂಗ್ ಅರಣ್ಯ ಪ್ರದೇಶದ ಸಿಬ್ಬಂದಿ ಗಸ್ತು ಮಾಡುವಾಗ ಮೃತ ಹುಲಿ ಮರಿ ಪತ್ತೆಯಾಗಿದೆ. ಸೀಳುನಾಯಿಗಳ ದಾಳಿಯಿಂದ ಹುಲಿಮರಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಮೃತಹುಲಿ ಮರಿ ದೇಹದ ಮಾಂಸದ ತುಂಡುಗಳನ್ನು ಮೈಸೂರು (Mysuru) ಮತ್ತು ಹೈದರಾಬಾದ್ ನ (Hyderabad) ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯ ಪ್ರಕಾರ ಮೃತ ಹುಲಿಯನ್ನು ಸುಡಲಾಗಿದೆ. ಇದನ್ನೂ ಓದಿ : – ಧಾರವಾಡದಲ್ಲಿ ನೀರಾವರಿ ಇಲಾಖೆ ವಿರುದ್ಧ ರೈತರ ಧರಣಿ