ಚಾಮುಂಡಿ ತಾಯಿಯ ದರ್ಶನಕ್ಕೆ ಬರುವವರಿಗೆ ಎರಡು ಡೋಸ್ ಕೋವಿಡ್ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಂಡಿರಬೇಕು. ಲಸಿಕೆ ಹಾಕಿಸಿಕೊಂಡಿರದಿದ್ದರೆ ದರ್ಶನಕ್ಕೆ ಬರುವ 72 ಗಂಟೆ ಮುಂಚೆ ಕೋವಿಡ್ ಟೆಸ್ಟ್ (COVIED TEST) ಮಾಡಿಸಿರಬೇಕು ಎಂದು ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ಇನ್ನೂ ಕೆಲವು ರೂಲ್ಸ್ (RULES) ಗಳ ಬಗ್ಗೆ ಜೂ. 25 ರಂದು ಸಭೆ ನಡೆಸಿ ತೀರ್ಮಾನ ಕೈ ಗೊಳ್ಳಲಾಗುತ್ತದೆ ಎಂದು ಎಸ್.ಟಿ. ಸೋಮಶೇಖರ್ (S.T SOMSHEKAR ) ಹೇಳಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಆಷಾಢ ಮಾಸ ಆರಂಭವಾಗುತ್ತಿದೆ. ಇದನ್ನೂ ಓದಿ :- ಈದ್ಗಾ ಮೈದಾನ ಬಿಬಿಎಂಪಿ ಮಾಲೀಕತ್ವದಲ್ಲಿ ಇಲ್ಲ – ತುಷಾರ್ ಗಿರಿನಾಥ್
ಹಿನ್ನೆಲೆಯಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಹೊಸ ನಿಯಮ ತರಲಾಗುತ್ತಿದೆ. ಜು.1 ರಿಂದ ಆಷಾಢ ಮಾಸ ಆರಂಭವಾಗುವ ಕಾರಣ ಈ ಮಾಸದಲ್ಲಿ ಮೈಸೂರಿನ ಚಾಮುಂಡಿ ತಾಯಿಯ ದರ್ಶನಕ್ಕೆ ಲಕ್ಷಾಂತರ ಜನ ಬರುತ್ತಾರೆ. ಕೋವಿಡ್ ನಿಧಾನವಾಗಿ ಏರಿಕೆ ಆಗುತ್ತಿರುವ ಕಾರಣ ಹೊಸ ನಿಬಂಧನೆಗಳನ್ನು ಜಾರಿಗೆ ತರಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ.
ಇದನ್ನೂ ಓದಿ :- ಕಾಂಗ್ರೆಸ್ ನವರು ದೇಶದ ಜನರ ವಿಶ್ವಾಸ ಕಳೆದುಕೊಳ್ತಾರೆ – ಆರಗ ಜ್ಞಾನೇಂದ್ರ