ಜುಲೈ ನಿಂದ ಆರಂಭವಾಗುವ ಇಂಗ್ಲೆಂಡ್ (ENGLAND) ವಿರುದ್ಧದ ಪಂದ್ಯಗಳಿಗೆ ಭಾರತ ಸಿದ್ಧತೆಯಲ್ಲಿರುವಾಗಲೇ ಟೀಂ ಇಂಡಿಯಾ(TEAM INDIA) ಗೆ ಕೋವಿಡ್ ಕಾಡಲು ಶುರು ಮಾಡಿದೆ. ಆರ್ ಅಶ್ವಿನ್ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಬರ್ಮಿಂಗ್ ಹ್ಯಾಮ್ನಲ್ಲಿ ಇಂಗ್ಲೆಂಡ್ ವಿರುದ್ಧ ಮರು ನಿಗದಿಪಡಿಸಲಾದ ಟೆಸ್ಟ್ ಗೆ ಕೋವಿಡ್ (KOVID) ಅಡ್ಡಿಯಾಗಿದೆ. ಕೋವಿಡ್ ನಿಂದಾಗಿ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (ASHWIN) ತಮ್ಮ ತಂಡದೊಂದಿಗೆ ಯುಕೆಗೆ ಪ್ರಯಾಣಿಸಲು ನಿರಾಕರಿಸಿದ್ದಾರೆ. ಕಳೆದ ವಾರ ತಂಡವು ಲಂಡನ್ಗೆ ಆಗಮಿಸಿದ ನಂತರ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ : – ಭಾರತ- ದಕ್ಷಿಣ ಆಫ್ರಿಕಾ ಪಂದ್ಯ ರದ್ದು ಹಿನ್ನೆಲೆ ಟಿಕೆಟ್ ಪಡೆದಿದ್ದವರಿಗೆ ಶೇ.50 ರಷ್ಟು ಹಣ ವಾಪಸ್
ಮಾಲ್ಡೀವ್ಸ್ ನಿಂದ ರಜೆ ಮುಗಿಸಿಕೊಂಡು ಬಂದ ವಿರಾಟ್ ಕೊಹ್ಲಿ(Virat Kohli)ಗೆ ಕೋವಿಡ್ ಪಾಸಿಟಿವ್ ಬಂದಿದೆ. ಜುಲೈ 1 ರಿಂದ 5 ರವರೆಗೆ ಭಾರತ ತಂಡ ಬರ್ಮಿಂಗ್ಹ್ಯಾಮ್ನ ಎಡ್ಜ್ ಬಾಸ್ಟನ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಲಿದೆ. ಕೋವಿಡ್ ನಿಂದ ಸ್ಥಗಿತಗೊಂಡಿದ್ದ ಈ ಪಂದ್ಯವನ್ನು ಮರುನಿಗದಿ ಮಾಡಲಾಗಿದೆ. ಸದ್ಯ ಭಾರತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ : – ಭಾರತ v/s ದಕ್ಷಿಣ ಆಫ್ರಿಕಾ ಕ್ರಿಕೆಟ್ ಪಂದ್ಯ – ಸಂಚಾರದಲ್ಲಿ ಬದಲಾವಣೆ