ಉತ್ತರ ಕರ್ನಾಟಕ (Uttar karnataka) ಪ್ರತ್ಯೇಕ ರಾಜ್ಯ ಬಗ್ಗೆ ಸಚಿವ ಉಮೇಶ್ ಕತ್ತಿ (Umesh katti) ಪುನರುಚ್ಛಾರ ವಿಚಾರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish jarakiholli) ಪ್ರತಿಕ್ರಿಯೆ ನೀಡಿದ್ದಾರೆ. ಮೂರು ಕೋಟಿ ಜನಸಂಖ್ಯೆ ಇದ್ದಲ್ಲಿ ಎರಡು ರಾಜ್ಯ ಮಾಡಲು ಮಸೂದೆ ತರಲು ಬಿಜೆಪಿ ಪ್ಲ್ಯಾನ್ ಇದ್ದು, ಅದರ ಕುರಿತು ಚಿಂತನೆ ನಡೀತಿದೆ.
ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು ಈ ಕಾನೂನು ತಂದರೆ ಆಟೋಮ್ಯಾಟಿಕ್ ಆಗಿ ಎರಡು ರಾಜ್ಯಗಳಾಗುತ್ತೇವೆ. ಹಿಂದೆ ಪ್ರಧಾನಿ ಮೋದಿ ಈ ಬಗ್ಗೆ ಪ್ರಸ್ತಾಪ ಮಾಡಿದ್ರು ಎಂದು ಹೇಳಿದರು.ಇದೇ ವೇಳೆ ಚಿಕ್ಕ ರಾಜ್ಯಗಳಾದ್ರೆ ಅಭಿವೃದ್ಧಿ ಆಗುತ್ತಾ ಎಂದು ಮಾಧ್ಯಮಗಳ ಪ್ರಶ್ನೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕ ರಾಜ್ಯಗಳಾದ್ರೆ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು. ಇಲ್ಲಿ ಪ್ರತ್ಯೇಕ ಅನ್ನೋ ಪ್ರಶ್ನೆ ಇಲ್ಲ. ಅವರು ಕಾನೂನು ತರುತ್ತಿದ್ದಾರೆ. ಪ್ರತ್ಯೇಕ ರಾಜ್ಯವೆನ್ನುವ ಪ್ರಶ್ನೆ ಬೇರೆ, ಹೋರಾಟ ಮಾಡಿ ಪಡೆಯೋದು ಬೇರೆ. ತೆಲಂಗಾಣ ಹೇಗೆ ಹೋರಾಟ ಮಾಡಿ ಪಡೆದ್ರು, ಹಾಗೇ ಇದು ಹೋರಾಟ ಅಲ್ಲ ಕಾನೂನನ್ನೇ ತರುತ್ತಿದ್ದಾರೆ. ಪ್ರತ್ಯೇಕ ರಾಜ್ಯ ಮಾಡಬೇಕೆಂಬುದು ಬಿಜೆಪಿ ಅಜೆಂಡಾದಲ್ಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – JDS BREAKING – ಜೆಡಿಎಸ್ ನಿಂದ ಇಬ್ಬರು ಶಾಸಕರ ಉಚ್ಛಾಟನೆ