ಜೆ.ಡಿ.ಎಸ್ (JDS) ನಿಂದ ಉಚ್ಛಾಟನೆ ಮಾಡಿದ್ದರಲ್ಲಿ ಹೊಸದೇನಿಲ್ಲ. ಉಚ್ಛಾಟನೆ ಮಾಡಿದ್ದು ನನಗೆ ಸಂತೋಷವಾಗಿದೆ ಎಂದು ಎಸ್ ಆರ್ ಶ್ರೀನಿವಾಸ್ (S R Srinivas) ಹೇಳಿದ್ದಾರೆ.
ತುಮಕೂರಿನಲ್ಲಿ (Tumkuru) ಮಾತನಾಡಿದ ಅವರು ಈ ಬೆಳವಣಿಗೆ ಮುಜುಗರ, ಅವಮಾನ ಎಂದು ನನಗೆ ಅನಿಸೋದಿಲ್ಲ. ಅವರು ನನ್ನ ವಿರುದ್ಧ ಅಭ್ಯರ್ಥಿಯನ್ನು ತಯಾರು ಮಾಡಿದಾಗಲೇ ನಾನು ಉಚ್ಛಾಟಿತನಾಗಿದ್ದೆ. ಡಿಸೆಂಬರ್ ನಲ್ಲಿ (December) ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ರಾಜೀನಾಮೆ ಕೊಟ್ಟು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಇದೇ ವೇಳೆ ಸ್ಪೀಕರ್‌ಗೆ ದೂರು ನೀಡುವ ವಿಚಾರಕ್ಕೆ ಎಸ್ ಆರ್ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ. ಸದನದಲ್ಲಿ ವಿಪ್ ಉಲ್ಲಂಘನೆಯಾಗಿದ್ರೆ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳಿಂದ ದಾಳಿ – ಕಡತಗಳ ಪರಿಶೀಲನೆ