ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಮೈಸೂರು ಭೇಟಿ ಕಾರ್ಯಕ್ರಮಕ್ಕೆ ಬರೋಬ್ಬರಿ 25 ಕೋಟಿ ರೂ. ವೆಚ್ಚವಾಗಿದೆ. ಈ 25 ಕೋಟಿ ರೂ. ವೆಚ್ಚದಲ್ಲಿ 10 ಕೋಟಿ ರೂ. ಗಳನ್ನು ಮೈಸೂರು ನಗರ ಪಾಲಿಕೆ ವೆಚ್ಚ ಮಾಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra modi) ಸಂಚರಿಸುವ ರಸ್ತೆ ಡಾಂಬರೀಕರಣ (Tar) ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಉಳಿದ 15 ಕೋಟಿ ರೂ. ಹಣವನ್ನು ಪ್ರಧಾನಿ ಭಾಗವಹಿಸುವ ಅರಮನೆ (Palace) ಆವರಣದ ಯೋಗ, ಮಹಾರಾಜ ಕಾಲೇಜು ಮೈದಾನದಲ್ಲಿ (Maharaja college ground) ನಡೆದ ಕಾರ್ಯಕ್ರಮ, ಚಾಮುಂಡಿ ಬೆಟ್ಟ (Chamundi hill) ಭೇಟಿ, ಹೋಟೆಲ್ ವಾಸ್ತವ್ಯ ಸೇರಿದಂತೆ ನಾನಾ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ.
ಮೈಸೂರು (Mysuru) ನಗರಕ್ಕೆ ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಿಲ್ಲ. ಮೋದಿ ಅವರ ಭೇಟಿಗೂ ಮುನ್ನವೇ ಮೈಸೂರಿನ ಪ್ರತಿ ಕ್ಷೇತ್ರಕ್ಕೂ 50 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿ ನೀಡಿದ್ದಾರೆ. ಶಾಸಕ ರಾಮದಾಸ್ ಕ್ಷೇತ್ರಕ್ಕೆ 100 ಕೋಟಿ ರೂ. ನೀಡಿದ್ದಾರೆ. ಇದನ್ನೂ ಓದಿ : – 2ರೂ ಭಿಕ್ಷೆ ಬೇಡಿ ನಿರ್ಮಿಸಿದ್ದ ವಸತಿ ನಿಲಯ ಇಂದು 5 ಸಾವಿರ ಮಕ್ಕಳಿಗೆ ಅಕ್ಷರ ದಾಸೋಹ ನೀಡುತ್ತಿದೆ – ಇದು ಎಲ್ಲಿದೆ ಗೊತ್ತಾ..?