ಚಾಮರಾಜನಗರದ (Chamarajanagara) ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜನೆ ಮಾಡಿದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ .
48 ನವ ಜೋಡಿಗಳು ಮಲೆ ಮಹದೇಶ್ವರ (Male mahadeshwara) ಸನ್ನಿದಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವ ಜೋಡಿಗಳಿಗೆ ಪ್ರಾಧಿಕಾರದ ವತಿಯಿಂದ ವಧುವಿಗೆ ಚಿನ್ನದ ಮಾಂಗಲ್ಯ, ಬೆಳ್ಳಿ ಕಾಲುಂಗುರ, ಸೀರೆ ಹಾಗೂ ವರನಿಗೆ ಪಂಚೆ, ಶರ್ಟ್, ಟವಲ್ ನೀಡಲಾಯಿತು. ಸಾಲೂರು ಶ್ರೀಗಳು, ಸ್ಥಳೀಯ ಶಾಸಕ ಆರ್ ನರೇಂದ್ರ (R.Narendra) ಜಿಲ್ಲಾಧಿಕಾರಿ ಚಾರುಲತಾ ಸೋಮಾಲ್ (Charulatha somal)
ಹಾಗೂ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್. ಕಾತ್ಯಾಯಿನಿದೇವಿ (Kantyayini) ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಿದ್ದರು. 48 ನೂತನ ಜೋಡಿಗಳಲ್ಲಿ 2 ವಿಕಲ ಚೇತನ ಹಾಗೂ ತಮಿಳುನಾಡಿನ (Tamil nadu) 3 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ : – ಮರಿಯಾನೆಗೆ Z+ ಭದ್ರತೆ – ಇದು ಎಲ್ಲಿ ಗೊತ್ತಾ…?