ನೀವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಿ. ನಾವು ಹೊಸದಾಗಿ ಪಕ್ಷ ಕಟ್ಟುತ್ತೇವೆ ಎಂದು ಶಿವಸೇನೆ ರಾಜ್ಯಸಭೆ ಸದಸ್ಯ ಸಂಜಯ್ ರಾವತ್ (Sanjay rawat) ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಹಾಗೂ ಎನ್ಸಿಪಿ ಜತೆಗಿನ ಮೈತ್ರಿ ಕಡಿದುಕೊಳ್ಳಬೇಕು ಎಂದು ಬೇಡಿಕೆ ಇಟ್ಟಿರುವ ಏಕನಾಥ ಶಿಂಧೆ (Ekhnath Sindhe) ನೇತೃತ್ವದ ರೆಬೆಲ್ ಶಾಸಕರಿಗೆ, ನೇರ ಸಂದೇಶ ರವಾನೆ ಮಾಡಿದ್ದಾರೆ.
ಉದ್ಧವ್ ಠಾಕ್ರೆ (Udhav thackray) ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಬಂಡಾಯ ಸಾರಿರುವ ಎಲ್ಲಾ ಶಾಸಕರು ವಿಧಾನಸಭೆಗೆ ಬರಲಿ. ಬಳಿಕ ನಾವು ನೋಡಿಕೊಳ್ಳುತ್ತೇವೆ. ಬಿಟ್ಟು ಹೋದ ಶಾಸಕರು ಮಹಾರಾಷ್ಟ್ರದಲ್ಲಿ ಓಡಾಡಲು ಕೂಡ ಸಾಧ್ಯವಿಲ್ಲ’ ಎಂದು ಅತೃಪ್ತರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.ಯಾರೆಲ್ಲಾ ಹೋಗಬೇಕು ಎಂದಿದ್ದೀರೋ ಹೋಗಬಹುದು. ಮುಂದಿನ ಚುನಾವಣೆಯನ್ನು ನಾವು ಗೆಲ್ಲುತ್ತೇವೆ.
ಈ ನೆಲ ಶಿವಸೇನೆ ಹಾಗೂ ಬಾಳಾ ಸಾಹೇಬ್ ಠಾಕ್ರೆ ಅವರ ನೆಲ. ನಾವು ಮತ್ತೆ ಫೀನಿಕ್ಸ್ನಂತೆ ಎದ್ದು ನಿಲ್ಲುತ್ತೇವೆ. 56 ವರ್ಷಗಳಿಂದ ಸವಾಲುಗಳನ್ನು ಎದುರಿಸುತ್ತಾ ಬಂದಿದ್ದೇವೆ. ಹೆಚ್ಚೆಂದರೆ ಏನಾಗಬಹುದು?’ ಎಂದು ಪ್ರಶ್ನೆ ಮಾಡಿದ್ದಾರೆ. ಸಚಿವಗಿರಿ ಕಳೆದುಕೊಳ್ಳಬಹುದು . ನೀವು ED, CBI ಯನ್ನು ಛೂ ಬಿಟ್ಟು ನಮ್ಮನ್ನು ಜೈಲಿಗೆ ಕಳುಹಿಸಬಹುದು. ಶೂಟ್ ಮಾಡಬಹುದು ಅಷ್ಟೇ. ಎಲ್ಲವನ್ನೂ ನೋಡಿದ್ದೇವೆ ಯಾವುದಕ್ಕೂ ಹೆದರುವುದಿಲ್ಲ’ ಎಂದು ಗುಡುಗಿದ್ದಾರೆ. ಇದನ್ನೂ ಓದಿ : – ಅಖಂಡ ರಾಜ್ಯಕ್ಕೆ ಮಾತ್ರ ನನ್ನ ಬೆಂಬಲವಿದೆ ಎಂದ ಶಾಸಕ ಶ್ರೀಮಂತ್ ಪಾಟೀಲ್