ಅಸದ್ ರೌಫ್ (Asad rauf) ಕ್ರಿಕೆಟ್ ಪ್ರೇಮಿಗಳು (Cricket lovers) ಈ ಹೆಸರನ್ನ ಕೇಳಿರ್ತೀರಾ..? ಒಂದು ಕಾಲದಲ್ಲಿ ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ (ICC Elite Panel Umpire) ಆಗಿ ಕಾರ್ಯನಿರ್ವಹಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ (Internatinal cricket) ದೊಡ್ಡ ಹೆಸರು ಮಾಡಿದ್ದ ಪಾಕಿಸ್ತಾನದ (Pakistan) ಅಸದ್ ರೌಫ್ ಈಗ ಲಾಹೋರ್ (Lahore) ಹಾಗೂ ಲಂಡಾ ಬಜಾರ್ನಲ್ಲಿ ಬಟ್ಟೆ ಹಾಗೂ ಶೂ ಸಂಬಂಧಿತ ಎರಡು ಅಂಗಡಿಗಳನ್ನು ನಡೆಸುತ್ತಿದ್ದಾರೆ.
2000 ರಿಂದ 2013 ರವರೆಗೆ ಅಸದ್ ರೌಫ್, 170 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದರಲ್ಲಿ 49 ಟೆಸ್ಟ್ಗಳು, 98 ಏಕದಿನ ಪಂದ್ಯಗಳು ಹಾಗೂ 23 ಟಿ20 ಪಂದ್ಯಗಳಲ್ಲಿ ಅವರು ಅಂಪೈರ್ ಸೇವೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಐಸಿಸಿ ಅಂಪೈರ್ಗಳ ಎಲೈಟ್ ಪ್ಯಾನೆಲ್ನಲ್ಲಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.ಐಪಿಎಲ್ ಪಂದ್ಯಗಳಲ್ಲಿ ಬೆಟ್ಟಿಂಗ್ ಸಂಬಂಧ ಅಸದ್ ರೌಫ್ ಬುಕ್ಕಿಗಳಿಂದ ಹಲವು ಗಿಫ್ಟ್ಗಳನ್ನು ಪಡದುಕೊಂಡಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು. IPL-2013 ಸಮಯದಲ್ಲಿ ಬುಕ್ಕಿಗಳಿಂದ ದುಬಾರಿ ಬಹುಮಾನಗಳನ್ನು ಸ್ವೀಕರಿಸಿದ ಆರೋಪದ ಮೇಲೆ ನಿಷೇಧಕ್ಕೊಳಗಾಗಿದ್ದರು. ಇದನ್ನೂ ಓದಿ : – 2011 ರ ಜನಸಂಖ್ಯೆ ಆಧಾರದ ಮೇಲೆ ಬಿಬಿಎಂಪಿ ವಾರ್ಡ್ ಮರುವಿಂಗಡನೆ –ತುಷಾರ್ ಗಿರಿನಾಥ್
ಈ ಹಿನ್ನೆಲೆಯಲ್ಲಿ ಅವರನ್ನು ಬಿಸಿಸಿಐ ಐದು ವರ್ಷಗಳ ಕಾಲ ಅಮಾನತುಗೊಳಿಸಿತ್ತು. ಈ ಮೂಲಕ ರೌಫ್ ಅವರ ಅಂಪೈರ್ ವೃತ್ತಿ ಜೀವನ ಅಂತ್ಯವಾಗಿದೆ. ಇದೀಗ ಪಾಕಿಸ್ತಾನದ ಲಾಹೋರ್ ಹಾಗೂ ಲಂಡಾ ಬಜಾರ್ನಲ್ಲಿ ಎರಡು ಅಂಗಡಿಗಳನ್ನು ನಡೆಸುತ್ತಿದ್ದಾರೆ. ತಾನು ಮಾಡುತ್ತಿರುವ ಕೆಲಸದಲ್ಲಿ ತನಗೆ ತೃಪ್ತಿ ಇದೆ ಅನ್ನುತ್ತಿದ್ದಾರೆ ಅಸಾದ್ ರವೂಪ್. ಅದ್ಕೆ ಹೇಳೋದು ಕಾಲ ಅನ್ನೋದು ಯಾರನ್ನು ಬಿಡಲ್ಲ. ಇದನ್ನೂ ಓದಿ : – ಬಿಜೆಪಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಕೆಲಸ ಮಾಡುತ್ತಿದೆ – ರಾಮಲಿಂಗಾ ರೆಡ್ಡಿ