ಹೊಸ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ (Agnipath) ಯುವಕರಿಗೆ ಮತ್ತು ದೇಶಕ್ಕೆ ಹಾನಿಕಾರಕ, ಈ ಯೋಜನೆಯನ್ನು ಪರಿಶೀಲಿಸುವಂತೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಒತ್ತಾಯಿಸಿದ್ದಾರೆ.
“ಅಗ್ನಿಪಥ್ ಯೋಜನೆಯು ನಮ್ಮ ಯುವಕರಿಗೆ ಮತ್ತು ದೇಶಕ್ಕೆ ಹಾನಿಕಾರಕವಾಗಿದೆ. ನಾಲ್ಕು ವರ್ಷಗಳ ಸೇವೆಯ ನಂತರ ಅವರನ್ನು ಮಾಜಿ ಸೈನಿಕರೆಂದು ಕರೆಯಲಾಗುವುದು. ಯಾವುದೇ ಪಿಂಚಣಿ ಅವರಿಗಿರುವುದಿಲ್ಲ. ಕೇಂದ್ರ ಸರ್ಕಾರ ಇದನ್ನು ಪರಿಶೀಲಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ” ಎಂದು ಹೇಳಿದ್ದಾರೆ. ಜೂನ್ 14ರಂದು ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಘೋಷಿಸಿದಂದಿನಿಂದ ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹದಿನೇಳರಿಂದ 21 ವರ್ಷದ ಮಧ್ಯೆಯಿರುವ ಯುವಕ -ಯುವತಿಯರನ್ನು 4 ವರ್ಷಗಳ ಕಾಲ ಸೇನೆಗೆ ಸೇರಿಸುವ ಯೋಜನೆ ಇದಾಗಿದೆ. ನಾಲ್ಕು ವರ್ಷಗಳ ನಂತರ ಇವರಿಗೆ ಗ್ರಾಚ್ಯುಟಿ, ಪಿಂಚಣಿ ಸೌಲಭ್ಯ ಇರುವುದಿಲ್ಲ.
ಇದನ್ನೂ ಓದಿ : – NDA ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ ಹಿನ್ನೆಲೆ- ಸಿಎಂ ಚೌಹಾಣ್ ಡ್ಯಾನ್ಸ್ ವಿಡಿಯೋ ವೈರಲ್ !