ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ (anjanadri ) ಪರ್ವತಕ್ಕೆ ಮೈಸೂರು (mysore )ಮಹಾರಾಜರಾದ ಯದುವೀರ್ (Yadavir) ಒಡೆಯರ್ ಮತ್ತು ಶ್ರೀಮತಿ ತ್ರಿಶಿಕಾ (Trishaika ) ಕುಮಾರಿಯವರು ಭೇಟಿ ನೀಡಿದ್ದರು.
ಹನುಮ ಹುಟ್ಟಿದ ಸ್ಥಳ ಎಂದೇ ಹೆಸರುವಾಸಿಯಾಗಿರುವ ಅಂಜನಾದ್ರಿ ಪರ್ವತಕ್ಕೆ ದಂಪತಿ ಸಮೇತ ಆಗಮಿಸಿದ ಯದುವೀರ್ ಅವರು ಹನುಮನಿಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ : – ರಾಜ್ಯದಲ್ಲಿ ಕೊರೊನಾ ಬೆನ್ನಲ್ಲೇ ಡೆಂಗ್ಯೂ ಆತಂಕ
ಯದುವೀರ್ ಕುಟುಂಬ ಹಂಪಿ ಪ್ರವಾಸಕ್ಕೆ ಆಗಮಿಸಿದ ಹಿನ್ನಲೆ ಅಂಜನಾದ್ರಿ ಬೆಟ್ಟದ 575 ಮೆಟ್ಟಿಲೇರಿ ಹನುಮನ ದರ್ಶನ ಪಡೆದ್ರು.
ಇದೇ ವೇಳೆ ಮಾತನಾಡಿದ ಯದುವೀರ್ ಅವರು ಹನುಮ ಹುಟ್ಟಿದ ಸ್ಥಳಕ್ಕೆ ಎರಡನೇ ಬಾರಿ ಬರುತ್ತಿದ್ದೇನೆ. ಎಲ್ಲರಿಗೂ ಒಳ್ಳೆದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಇದೊಂದು ಅದ್ಭುತವಾದಂತಹ ಜಾಗ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : – ಸ್ಮಾರ್ಟ್ ಸಿಟಿ ಯೋಜನೆಯನ್ನು ಕಾಲಮಿತಿ ಒಳಗಡೆ ಪೂರ್ಣಗೊಳಿಸಿ – ಸ್ಮಾರ್ಟ್ ಸಿಟಿ ಎಂ ಡಿ ಗೆ ಸಿಎಂ ಖಡಕ್ ಆದೇಶ