ವಿರೋಧ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ (Yashwant Sinha ) ಸಂಸತ್ತಿನಲ್ಲಿ ಇಂದು ನಾಮಪತ್ರ ಸಲ್ಲಿಸಿದರು.
ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್ (CONGRESS ) ನಾಯಕ ರಾಹುಲ್ ಗಾಂಧಿ (RAHUL GHANDHI ) ಮತ್ತು ಎನ್.ಸಿ.ಪಿ ಯ ಶರದ್ ಪವಾರ್, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, (Mallikarjuna Kharge ) ಜೈ ರಾಮ್ ರಮೇಶ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು RLD ಮುಖ್ಯಸ್ಥ ಜಯಂತ್ ಚೌಧರಿ ಉಪಸ್ಥಿತರಿದ್ದರು. ಇದನ್ನೂ ಓದಿ : – ಮಹಾರಾಷ್ಟ್ರ ಬಿಕ್ಕಟ್ಟು- ಏಕನಾಥ್ ಶಿಂಧೆ ಟೀಂನ ಅನರ್ಹತೆ ನೊಟೀಸ್- ಇಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ
ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದಿಂದ ಒಮ್ಮತದ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಆಯ್ಕೆಯಾಗಿದ್ದಾರೆ. ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಆಗಿರುವ ಜಾರ್ಖಂಡ್ ನ ಮಾಜಿ ಗವರ್ನರ್ ದ್ರೌಪದಿ ಮುರ್ಮು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ : – ಮಹಾ ರಾಜಕೀಯ ಬಿಕ್ಕಟ್ಟು ನಡುವೆ ಸಂಜಯ್ ರಾವತ್ ಗೆ ED ಸಮನ್ಸ್