ರಾಜಸ್ಥಾನದ ಉದಯಪುರ(udayapura )ದಲ್ಲಿ ನಡೆದ ಘಟನೆ ಅತ್ಯಂತ ಹೇಯ ಕೃತ್ಯ. ಇದನ್ನು ನಾನು ಖಂಡಿಸುತ್ತೇನೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ (sunil kumar ) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಒಂದು ಹೇಳಿಕೆಗೆ ಕುತ್ತಿಗೆ ಕಡಿಯುವ ಮಾನಸಿಕತೆ ಬರುತ್ತೆ ಅಂದ್ರೆ, ಇದರ ಹಿಂದೆ ಕೇವಲ ಇಬ್ಬರು ಇದ್ದಾರೆ ಅಂತಾ ಅನಿಸಲ್ಲ. ಎಲ್ಲಿವರೆಗೂ ಓಟ್ ಬ್ಯಾಂಕ್ ಗಾಗಿ ರಾಜಕಾರಣ ನಡೆಯುತ್ತೋ, ಅಲ್ಲಿವರೆಗೂ ಇಂತಹಾ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ವಿಷಯಕ್ಕೆ ಸಿದ್ದರಾಮಯ್ಯ ಎದೆ ನಡುಗಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ನಿಜವಾಗಿಯೂ ಎದೆ ನಡುಗಿತ್ತಾ,ಅಥವಾ ಟ್ವೀಟ್ ನಲ್ಲಿ ಮಾತ್ರಾ ನಡುಗಿತ್ತಾ ಅಂತಾ ನೋಡೋಣ ಎಂದು ಸಿದ್ದರಾಮಯ್ಯ ವಿರುದ್ದ ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಗೂ ಹೆದರಿಸುವ ಕೆಲಸ ಮಾಡಿದ್ದಾರೆ. ಕಲ್ಲಂಗಡಿ ಘಟನೆ ಆದಾಗ ಖಂಡಿಸಬೇಕು ಅನಿಸಿತ್ತು, ಈಗ ಖಂಡಿಸಬೇಕು ಅಂತ ಅನಿಸುತ್ತಿಲ್ಲ. ಶಾಸಕನ ಮನೆಗೆ ಬೆಂಕಿ ಬಿದ್ದಾಗ, ಖಂಡಿಸಬೇಕು ಅನಿಸಲಿಲ್ಲ. ಹರ್ಷ (harsha )ಕೊಲೆ ಆದಾಗಾ ಖಂಡಿಸಬೇಕು ಅನಿಸಲಿಲ್ಲ ಇದೇ ಮಾನಸಿಕತೆ ಇರುವ ವ್ಯಕ್ತಿ ಗಳು ನಮ್ಮಲ್ಲಿ ಕೂಡಾ ಇದ್ದಾರೆ. ಒಬ್ಬ ಶಾಸಕನ ಮನೆಗೆ ಬೆಂಕಿ ಹಾಕುವ ಕೆಲಸ ಮಾಡಿದ್ದಾರೆ. ಅದೂ ಕೂಡಾ ಇದೇ ಮಾದರಿಯ ಮನಸ್ಥಿತಿ ಎಂದು ತಿಳಿಸಿದ್ರು. ಇದನ್ನೂ ಓದಿ – ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್- ರಾಜಸ್ತಾನದಲ್ಲಿ ವ್ಯಕ್ತಿಯ ಕತ್ತು ಸೀಳಿ ಬರ್ಬರ ಹತ್ಯೆ – ವಿಡಿಯೋ ವೈರಲ್
ಪ್ರಮೋದ್ ಮುತಾಲಿಕ್ ಖಂಡನೆ
ರಾಜಸ್ತಾನ ಟೇಲರ್ ಹತ್ಯೆ ಪ್ರಕರಣ ಖಂಡಿಸಿ ಧಾರವಾಡದಲ್ಲಿ ಶ್ರೀರಾಮ ಸೇನೆ ಧಾರವಾಡದ ಡಿಸಿ ಕಚೇರಿ ಎದುರು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (promod muthalik ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುತಾಲಿಕ್ ರಾಜಸ್ಥಾನದ ಹಿಂದೂ ವ್ಯಕ್ತಿ ಕೊಲೆ ಅತ್ಯಂತ ಹೇಯವಾದ ನೀಚ, ರಾಕ್ಷಸ ಕೃತ್ಯವಾಗಿದೆ ಇಡೀ ದೇಶಾದ್ಯಂತ ತಲೆ ತಗ್ಗಿಸುವ ಕೃತ್ಯ ಇದು. ಪ್ರಜಾಪ್ರಭುತ್ವ ಆಧಾರದ ಮೇಲೆ ನಮ್ಮ ದೇಶ ನಡೆಯುತ್ತಿದೆ. ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರ ಇದೆ.
ಈ ಹತ್ಯೆಗೆ ಸರ್ಕಾರವೇ ಜವಾಬ್ದಾರಿಯಾಗಿದೆ. ಇಡೀ ದೇಶದಲ್ಲಿ ಭಯೋತ್ಪಾದಕರನ್ನೇ ಕಾಂಗ್ರೆಸ್ ಬೆಳೆಸಿದೆ. ಇವರ ಹಿಂದೆ ಮುಲ್ಲಾ, ಮೌಲ್ವಿಗಳಿದ್ದಾರೆ ಅಥವಾ ಸಂಘಟನೆಗಳಿವೆ. ಒಂದು ತಿಂಗಳ ಒಳಗಡೆಯೇ ಅವರಿಗೆ ಶಿಕ್ಷೆ ಆಗಬೇಕು. ಇದನ್ನ ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು . ಸರ್ಕಾರ ನಾಟಕವನ್ನು ಮಾಡೋದನ್ನ ನಿಲ್ಲಿಸಬೇಕು. ಇಸ್ಲಾಂ ಮನಸಿಕತೆಯನ್ನ ನಿಲ್ಲಿಸಬೇಕು. ಅವರನ್ನ ಸಮುದಾಯದಿಂದ ಬಹಿಷ್ಕಾರ ಹಾಕಬೇಕು. ಬುದ್ಧಿ ಜೀವಿಗಳು ಒಬ್ಬರಾದ್ರು ಮಾತಾಡಿ ಈಗ ಎಂದು ಹೇಳಿದ್ರು.
ಇದನ್ನೂ ಓದಿ – ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ – ಮಂಡ್ಯ ಕೂಡ ನನ್ನ ಬಿಡಲ್ಲ ..! ಸುಮಲತಾ ಅಂಬರೀಶ್