ತುಮಕೂರು (thumakuru) ಜಿಲ್ಲೆಯ ಮಧುಗಿರಿ ತಾಲ್ಲೂಕಿನ ದೊಡ್ಡಹಟ್ಟಿಯಲ್ಲಿ ವಿದ್ಯಾರ್ಥಿಗಳ ತಾಯಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ದೊಡ್ಡಹಟ್ಟಿ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಅಮಾನತುಗೊಂಡ ಶಿಕ್ಷಕ. ಈತ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲವಾಗಿ ಮೆಸೇಜ್ ಕಳುಹಿಸುತ್ತಿದ್ದ. ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳ ತಾಯಂದಿರ ನಂಬರ್ ಗಳನ್ನ ಶಿಕ್ಷಕ ಪಡೆಯುತ್ತಿದ್ದ. ಇದನ್ನೂ ಓದಿ – ರಾಜಸ್ತಾನದಲ್ಲಿ ಕನ್ನಯ್ಯಲಾಲ್ ಹತ್ಯೆ ಪ್ರಕರಣ – ಕೃತ್ಯ ಖಂಡಿಸಿದ ಸಚಿವ ಸುನೀಲ್ ಕುಮಾರ್
ವಿದ್ಯಾರ್ಥಿಗಳ ತಾಯಂದಿರ ವಾಟ್ಸಪ್ ಗೆ ಅಶ್ಲೀಲವಾಗಿ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ಗ್ರಾಮದ ಮಹಿಳೆಯರು ಶಿಕ್ಷಕ ಸುರೇಶ್ ವಿರುದ್ದ ಡಿಡಿಪಿಐಗೆ ದೂರು ನೀಡಿದ್ದರು. ಗ್ರಾಮದ ಯುವಕರೊಂದಿಗೆ ಶಿಕ್ಷಕ ಸುರೇಶ್ ಪ್ರತಿನಿತ್ಯ ಪಾರ್ಟಿ ಮಾಡುತ್ತಿದ್ದ ಎಂದು ಸಹ ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಿದ ಬಳಿಕ ಮಧುಗಿರಿ ಡಿಡಿಪಿಐ ರೇವಣ ಸಿದ್ದಪ್ಪ ಅಮಾನತು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ – ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್- ರಾಜಸ್ತಾನದಲ್ಲಿ ವ್ಯಕ್ತಿಯ ಕತ್ತು ಸೀಳಿ ಬರ್ಬರ ಹತ್ಯೆ – ವಿಡಿಯೋ ವೈರಲ್