ತಮ್ಮ ನಾಯಕನ ವಿರುದ್ಧ ಬಂಡೆದ್ದು ಮಹಾರಾಷ್ಟ್ರ (MAHARASTRA )ಸರ್ಕಾರ ಪತನದಂಚಿಗೆ ತಲುಪಿದ್ದರೂ ರೆಬೆಲ್ (REBEL)ಶಾಸರಿಗೆ ಇನ್ನೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೇಲಿರುವ ಮುನಿಸು ಇನ್ನೂ ಕಡಿಮೆಯಾದಂತೆ ಕಾಣುತ್ತಿಲ್ಲ.
‘ಉದ್ಧವ್ ಠಾಕ್ರೆ ತಮ್ಮದೇ ಪಕ್ಷದ 52 ಶಾಸಕರನ್ನು ಬಿಟ್ಟರು, ಮುಖ್ಯಮಂತ್ರಿಯವರ ಅಧಿಕೃತ ನಿವಾಸವನ್ನೂ ತೊರೆದರು. ಆದರೆ ಶರದ್ ಪವಾರ್ (SHARAD PAWAR )ಅವರ ಸಖ್ಯವನ್ನು ಮಾತ್ರ ಬಿಟ್ಟಿಲ್ಲ’ ಎಂದು ಬಂಡಾಯ ಸಚಿವ ಗುಲಾಬ್ರಾವ್ ಪಾಟೀಲ್ ಅಸಾಮಾಧಾನ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ : – ವಿಶ್ವಾಸಮತ ಯಾಚನೆಗೆ ಠಾಕ್ರೆಗೆ ರಾಜ್ಯಪಾಲ ಸೂಚನೆ – ನಾಳೆ ಮುಂಬೈಗೆ ಮರಳುವುದಾಗಿ ಏಕನಾಥ್ ಶಿಂಧೆ ಹೇಳಿಕೆ
ಆ ಮೂಲಕ ಶಿವಸೇನೆ( shiva sena )ಯ ಒಂದು ಕಾಲದ ಬದ್ಧ ಎದುರಾಳಿ ಎನ್ಸಿಪಿ ಜತೆ ಕೈ ಜೋಡಿಸಿದ್ದರ ಬಗ್ಗೆ ಕೋಪ ಹೊರ ಹಾಕಿದ್ದಾರೆ. ‘ಬಂಡಾಯ ಶಾಸಕರು ಅವಕಾಶವಾದಿಗಳು ಅಲ್ಲ. ನಾವು ಪಕ್ಷಕ್ಕಾಗಿ ಎಲ್ಲವನ್ನೂ ಮಾಡಿದೆವು. ನಮ್ಮ ಕೈಯಲ್ಲಿ ಯಾವುದೇ ಅಧಿಕಾರ ಇಲ್ಲದಾಗಲೂ ನಾವು ಪಕ್ಷಕ್ಕಾಗಿ ದುಡಿದೆವು’ ಎಂದು ತಿಳಿಸಿದ್ದಾರೆ. ತಮ್ಮದೇ ಪಕ್ಷದ 52 ಶಾಕಸರನ್ನು ಬಿಟ್ಟರು. ಆದರೆ ಅವರು ಶರದ್ ಪವಾರ್ ಅವರನ್ನು ಬಿಡಲು ತಯಾರಿಲ್ಲ. ನಾವು ಸರ್ವಸ್ವವನ್ನೂ ತ್ಯಾಗ ಮಾಡಿದೆವು. ನಾವು ಅವಕಾಶವಾದಿಗಳು ಅಲ್ಲ’ ಎಂದು ಅವರು ಗುವಾಹಟಿಯಿಂದಲೇ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : – ಮುಂಬೈಗೆ ಬಂದು ನನ್ನೊಂದಿಗೆ ಮಾತನಾಡಿ – ಬಂಡಾಯ ಶಿವಸೇನಾ ಶಾಸಕರಿಗೆ ಉದ್ದವ್ ಠಾಕ್ರೆ ಭಾವನಾತ್ಮಕ ಮನವಿ