ಪ್ರವಾದಿ ಮೊಹಮ್ಮದ್ (PROPHET MOHAMMAD ) ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ (NUPUR SHARMA) ಇಡೀ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ನೂಪುರ್ ಶರ್ಮಾ ಅವರ ಅರ್ಜಿಯನ್ನು ಸುಪ್ರೀಂ (SC) ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್ ನೂಪುರ್ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಪ್ರವಾದಿ ವಿರುದ್ಧ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಕ್ಕೆ ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಹೇಳಿದೆ. ಈಗ ದೇಶದಲ್ಲಿ ಏನಾಗುತ್ತಿದೆಯೋ ಅದಕ್ಕೆ ನೂಪುರ್ ಶರ್ಮಾ ಅವರೇ ಜವಾಬ್ದಾರರು ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ. ನೀವೂ ವಿವಾದಾತ್ಮಕ ಹೇಳಿಕೆ ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದೀರಾ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಉದಯ್ಪುರದಲ್ಲಿ ಟೈಲರ್ ಹತ್ಯೆ ಘಟನೆಗೆ ಆಕೆಯ ಆಕ್ರೋಶವೇ ಕಾರಣ ಎಂದು ಸುಪ್ರೀಂ ಕೋರ್ಟ್ (SUPREME COURT) ಹೇಳಿದೆ. ನೂಪುರ್ ಶರ್ಮಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸುಪ್ರೀಂಕೋರ್ಟ್, ಅಮಾನತುಗೊಂಡಿರುವ ಬಿಜೆಪಿ ವಕ್ತಾರರು ರಾಷ್ಟ್ರದ ಭದ್ರತೆಗೆ ಬೆದರಿಕೆ ಹಾಕಿರುವುದನ್ನು ಗಮನಿಸಿ ಇಡೀ ದೇಶದ ಕ್ಷಮೆ ಯಾಚಿಸುವಂತೆ ಸೂಚಿಸಿದೆ. ಇದನ್ನೂ ಓದಿ :- ಅಬ್ಬಾಬ್ಬ..! ಬಂಗಾರ ಬಲು ಭಾರ – ಆಮದು ತೆರಿಗೆ ಶೇ. 7.5 ರಿಂದ ಶೇ. 12.5ಕ್ಕೆ ಏರಿಕೆ
ಮಾಧ್ಯಮಗಳಲ್ಲಿ ಚರ್ಚೆಯ ದುರ್ಬಳಕೆಯಾದರೆ ಆ ಚಾನಲ್ ನಿರೂಪಕರ ವಿರುದ್ಧ ಮೊದಲಿಗೆ ಕೇಸ್ ಹಾಕಬೇಕು. ನೂಪುರ್ ಶರ್ಮಾ ನಾಲಿಗೆ ಸಡಿಲಬಿಟ್ಟು ಮಾತನಾಡಿದ್ದರಿಂದ ಇಡೀ ದೇಶಕ್ಕೆ ಬೆಂಕಿ ಬಿದ್ದಿತ್ತು. ಪ್ರಜಾಪ್ರಭುತ್ವದಲ್ಲಿ ಹುಲ್ಲಿಗೆ ಬೆಳೆಯುವ ಹಕ್ಕು ಇದೆ, ಕತ್ತೆಗೂ ತಿನ್ನುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.
ನೂಪುರ್ ಶರ್ಮಾ ಅರ್ಜಿಯನ್ನ ತಿರಸ್ಕರಿಸಿರುವ ಸುಪ್ರೀಂಕೋರ್ಟ್ ಹೈಕೋರ್ಟ್ಗೆ ಹೋಗಿ ಅರ್ಜಿ ಸಲ್ಲಿಸಲಿ ಎಂದು ಹೇಳಿದೆ. ನೂಪುರ ಶರ್ಮಾಗೆ ದೆಹಲಿ ಪೊಲೀಸರು ರೆಡ್ ಕಾರ್ಪೆಟ್ ಸ್ವಾಗತ ಕೋರಿರಬೇಕು. ಇಷ್ಟೊಂದು ಎಫ್.ಐ.ಆರ್. (FIR )ದಾಖಲಾದರೂ ದೆಹಲಿ ಪೊಲೀಸರು ಏಕೆ ಕ್ರಮ ಕೈಗೊಂಡಿಲ್ಲ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ತಮ್ಮ ವಿರುದ್ಧದ ಎಲ್ಲ ಕೇಸ್ ಗಳನ್ನು ದೆಹಲಿಗೆ ವರ್ಗಾವಣೆ ಮಾಡಬೇಕೆಂದು ನೂಪುರ್ ಶರ್ಮಾ ಕೋರಿದ್ದರು. ಇದೀಗ ನೂಪುರ್ ಶರ್ಮಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಗಲ್ಫ್ ರಾಷ್ಟ್ರಗಳಲ್ಲಿ ಭಾರೀ ಆಕ್ರೋಶವ್ಯಕ್ತವಾಗುತ್ತಿದೆ.
ಇದನ್ನೂ ಓದಿ :- ಇಂದು ಆಷಾಢ ಮಾಸದ ಮೊದಲ ಶುಕ್ರವಾರ – ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ