ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಮೊಹಮ್ಮದ್ ರಿಯಾಜ್ (
Mohammed Riaz ) ಮತ್ತು ಗೌಸ್ ಮೊಹಮ್ಮದ್ (Ghaus Mohammed ) ಸೇರಿದಂತೆ ನಾಲ್ವರು ಆರೋಪಿಗಳನ್ನು ಜುಲೈ 12ರವರೆಗೆ NIA ಕಸ್ಟಡಿಗೆ ಒಪ್ಪಿಸಲಾಗಿದೆ.
ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಲಾಯರ್ ಗಳು ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಬಾಟಲಿಗಳನ್ನು ಅವರ ಮೇಲೆ ಎಸೆದಿದ್ದಾರೆ. ಬಿಜೆಪಿ (BJP) ನಾಯಕಿ ನೂಪುರ್ ಶರ್ಮಾ(NUPUR SHARMA) ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿದ್ದಕ್ಕೆ ಟೈಲರ್ ಅವರನ್ನು ಹತ್ಯೆ ಮಾಡಲಾಗಿತ್ತು. ಹಾಡುಹಗಲೇ ಆರೋಪಿಗಳು ಕನ್ಹಯ್ಯಾ ಲಾಲ್ ಶಿರಚ್ಛೇದ ಮಾಡಿದ್ದರು.
ಇದನ್ನೂ ಓದಿ :- ಉದಯಪುರ ಕಿರಾತಕರಿಗೆ ಪಾಕಿಸ್ತಾನದಲ್ಲಿ ಸಿಕ್ಕಿತ್ತು ರುಂಡ ಕತ್ತರಿಸುವ ಟ್ರೈನಿಂಗ್..!