ವಿಜಯಪುರ (Vijayapura) ದಲ್ಲಿ ಲಕ್ಷಾಂತರ ಮೌಲ್ಯದ ಒಣದ್ರಾಕ್ಷಿ (RAISINS) ವಂಚನೆ ಪ್ರಕರಣವನ್ನು ವಿಜಯಪುರ ಪೊಲೀಸ (Police) ರು ಭೇದಿಸಿದ್ದಾರೆ. ಆರೋಪಿಯಿಂದ 2.2 ಕೋಟಿ ಮೌಲ್ಯದ 117 ಟನ್ ಒಣದ್ರಾಕ್ಷಿಯ ಎಂಟು ಲಾರಿಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ರೈತ (Farmers) ರಿಂದ ಒಣ ದ್ರಾಕ್ಷಿ ಖರೀದಿಸಿ ವಂಚನೆ ಮಾಡಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಮಲಕುಮಾರ ಸೋಹನಲಾಲ್, ಸಚೀನ ಮಹೇಂದ್ರಕುಮಾರ ಪಟೇಲ್, ಸುನೀಲ್, ಜಯೇಶ್, ಭರತ ಪಟೇಲ್, ನೀಲ್ ಪಟೇಲ್, ರೋಣಿಕಕುಮಾರ್ ಪಟೇಲ್, ಪಿಂಕೇಶ ಪಟೇಲ್ ವಿರುದ್ಧ ಕೇಸ್ ದಾಖಲಾಗಿತ್ತು. ಇದನ್ನೂ ಓದಿ :- ಚಿಕ್ಕಬಳ್ಳಾಪುರದಲ್ಲಿ ಮರಗಳ ಮಾರಣಹೋಮ – ಪರಿಸರ ಪ್ರೇಮಿಗಳ ಆಕ್ರೋಶ
ಕಮಲಕುಮಾರ ಸೋಹನಲಾಲ್ (Kamalakumara sonhanlal) ಬಂಧಿತ ಆರೋಪಿಯಾಗಿದ್ದಾನೆ. ಉಳಿದ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ. ಎಸ್ಪಿ ಆನಂದಕುಮಾರ್ (Anandkumar) ಈ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ :- ವಿಜಯನಗರದಲ್ಲಿ ಪಡಿತರ ಅಕ್ಕಿ ಪಡೆಯಲು ಗ್ರಾಮಸ್ಥರ ಪರದಾಟ