ದಾವಣಗೆರೆ (Belagavi) ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ವರುಣ (Rain) ಅಬ್ಬರಿಸುತ್ತಿದ್ದು ,ಭಾರೀ ಮಳೆ ರೈತ (Farmers) ರ ಮುಖದಲ್ಲಿ ಸಂತಸ ಮೂಡಿಸಿದೆ. ಸತತ ಮಳೆಯಿಂದ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬೆಳ್ಳಂಬೆಳಗ್ಗೆ ಮಳೆಯಿಂದ ಶಾಲಾ ಮಕ್ಕಳು, ಸಾರ್ವಜನಿಕರು, ಅಗತ್ಯ ವಸ್ತು ಖರೀದಿಸುವರು ಪರದಾಡಿದ್ರು.
ಬೆಳಗ್ಗೆ 6 ಗಂಟೆಗೆ ಶುರುವಾದ ಮಳೆ, ಸತತ ಎರಡ್ಮೂರು ತಾಸು ಸುರಿದಿದೆ. ಕಳೆದ 15 ದಿನದಿಂದ ಮಳೆಯಾಗದಿದ್ದರಿಂದ ಆತಂಕಕ್ಕೆ ಒಳಗಾಗಿದ್ದ ರೈತರಿಗೆ ಈ ಮಳೆ ಖುಷಿ ನೀಡಿದೆ. ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಮೆಕ್ಕೆಜೋಳ ಬಿತ್ತನೆ ಮಾಡಿ ಮಳೆಯಾಗಿ ರೈತರು ಕಾಯುತ್ತಿದ್ದರು. ಬೆಳೆಗೆ ಮಳೆ ಇಲ್ಲದೆ ಒಣಗುವ ಸ್ಥಿತಿ ನಿರ್ಮಾಣವಾಗಿತ್ತು. ಈಗ ಉತ್ತಮ ಮಳೆಯಾಗಿದ್ದರಿಂದ ಸಹಜವಾಗಿ ರೈತರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ : – ಕೊಡಗಿನಲ್ಲಿ ಮಳೆರಾಯನ ಅಬ್ಬರ – ಭಾಗಮಂಡಲ-ನಾಪೋಕ್ಲು ರಸ್ತೆ ಸಂಚಾರ ಬಂದ್
ಬೆಳಗಾವಿ (Belagavi) ಯಲ್ಲೂ ವರ್ಷಧಾರೆ ಬೆಳಗಾವಿಯಲ್ಲಿಯೂ ಇಂದು ಬೆಳಗ್ಗೆಯಿಂಧ ಧಾರಾಕಾರ ಮಳೆಯಾಗಿದೆ. ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಇದನ್ನೂ ಓದಿ : – ತುಂಗಭದ್ರ ನದಿಯ ಕಲುಷಿತ ನೀರು ಕುಡಿದು 40ಕ್ಕೂ ಅಧಿಕ ಜನ ಅಸ್ವಸ್ಥ – ಓರ್ವ ಮಹಿಳೆ ಸಾವು