ವಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ಮನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಇಂದು ಭೇಟಿ ನೀಡಿದ್ದಾರೆ. ಇದೇ ತಿಂಗಳು 14 ಮತ್ತು 15 ರಂದು ಇಬ್ರಾಹಿಂ ಮಗಳ ಮದುವೆ ನಡೆಯಲಿದ್ದು, ಮಗಳ ಮದುವೆಗೆ ಆಹ್ವಾನಿಸಲು ಸಿದ್ದರಾಮಯ್ಯ ಮನೆಗೆ ಭೇಟಿನೀಡಿದ್ದಾರೆ.
ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಇಬ್ರಾಹಿಂ, ಮಗಳ ಮದುವೆಗೆ ಸಿದ್ದರಾಮಯ್ಯ ಅವರಿಗೆ ಆಹ್ವಾನ ಪತ್ರ ನೀಡಲು ಬಂದಿದ್ದೇನೆ. ಅದರ ಹೊರತಾಗಿ ಬೇರೇನೂ ಮಾತನಾಡಿಲ್ಲ. “ಸಿದ್ದರಾಮೋತ್ಸವ” ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಹೋಗುವುದಕ್ಕೆ ನಮ್ಮದು ಬೇರೆ ಕಂಪನಿ. ಹೀಗಾಗಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಸಿದ್ದರಾಮಯ್ಯ ಅವರು ಎರಡನೇ ಮದುವೆ ಆದರೆ ಹೋಗ್ತೇನೆ. ಅದೇನು ಮದುವೆ ಕಾರ್ಯಕ್ರಮ ಅಲ್ಲವಲ್ಲ ಎಂದು ತಮಾಷೆ ಮಾಡಿದ್ರು.
ಇದನ್ನೂ ಓದಿ : – ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ- ಅದಕ್ಕೆ ಹೇಳಿದೆಲ್ಲ ಉಲ್ಟಾ ಆಗ್ತಿದೆ – ಸಿ.ಟಿ ರವಿ