ವ್ಯವಸಾಯಗಳಿಗೆ ರೈತರು ಸಾಮಾನ್ಯವಾಗಿ ಎತ್ತುಗಳನ್ನು, ಕೆಲವೊಮ್ಮೆ ಕೋಣ, ಎಮ್ಮೆಗಳನ್ನ ಬಳಸಿಕೊಳ್ತಾರೆ. ಆದರೆ ಇಲ್ಲೊಬ್ಬರು ರೈತರ ಹೊಲ ಉಳುಮೆ ಮಾಡೋದು ಎತ್ತುಗಳೂ ಅಲ್ಲ, ಟ್ರಾಕ್ಟರ್ ಕೂಡಾ ಅಲ್ಲ. ಟಗರುಗಳೇ ಇಲ್ಲಿ ರೈತನಿಗೆ ಜೀವನಾಡಿ ಆಗಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದ ರೈತರೋರ್ವರು ಕೃಷಿ ಕಾರ್ಯಕ್ಕೆ ಟಗರುಗಳನ್ನು ಬಳಸುತ್ತಿದ್ದಾರೆ. ಶೇಖಪ್ಪ ಕುರುಬ ಎಂಬ ರೈತನೇ ಟಗರು ಬಳಸಿ ಉಳುಮೆ ಮಾಡ್ತಿರೋ ರೈತ. ಒಂದೂವರೆ ಎಕರೆ ಜಮೀನಿನ ವ್ಯವಸಾಯ ಕೆಲಸಗಳಿಗೆ ತಾವು ಸಾಕಿರುವ ಕನಕ ಮತ್ತು ರಾಯಣ್ಣ ಹೆಸರಿನ ಟಗರುಗಳನ್ನು ಬಳಕೆ ಮಾಡುತ್ತಿದ್ದಾರೆ. ಇದನ್ನೂ ಓದಿ : – BANGLORE BREAKING- ವಾಸಕ್ಕೆ ಯೋಗ್ಯವಾಗಿಲ್ಲವಂತೆ ಬೆಂಗಳೂರು- ಜಾಗತಿಕ ಸೂಚ್ಯಂಕದಲ್ಲಿ ಅತಿ ಕಳಪೆ ಸ್ಥಾನ ಪಡೆದ ಸಿಲಿಕಾನ್ ಸಿಟಿ
ಕಳೆದ ೯ ತಿಂಗಳ ಹಿಂದೆ ಕುರುಬರ ದೊಡ್ಡಿಯಲ್ಲಿ ಈ ಟಗರುಗಳನ್ನು ತಲಾ ೬೫೦೦ ರೂಪಾಯಿ ಕೊಟ್ಟು ಖರೀದಿಸಿರುವ ಶೇಖಪ್ಪ ತಮ್ಮ ಮಕ್ಕಳಂತೆ ಈ ಟಗರುಗಳನ್ನು ಸಾಕಿದ್ದಾರೆ. ಆರಂಭದಲ್ಲಿ ಚಿಕ್ಕ ಬಂಡಿಗೆ ಟಗರುಗಳನ್ನು ಕಟ್ಟಿ ಅಭ್ಯಾಸ ಮಾಡಿಸಿದ್ದಾರೆ.
ಆ ಮೇಲೆ ನೀರು ತರುವ ಬಂಡಿಯನ್ನು ಕುರಿಗಳಿಗೆ ಕಟ್ಟಿ ಅಭ್ಯಾಸ ಮಾಡಿಸಿದ್ದಾರೆ. ನೀರಿನ ಬಂಡಿ ಮತ್ತು ಚಿಕ್ಕ ಬಂಡಿಗೆ ಕಟ್ಟಿ ಅಭ್ಯಾಸವಾಗಿದ್ದ ಟಗರುಗಳನ್ನು ಉಳುಮೆಗೆ ಬಳಸಲು ಮುಂದಾಗಿದ್ದಾರೆ. ಮೊದಲೇ ಅಭ್ಯಾಸವಾಗಿದ್ದ ಟಗರುಗಳು ಎತ್ತಿನಂತೆ ಎಡೆಕುಂಟಿ ಹೊಡೆಯಲು ರೈತನಿಗೆ ಸಹಾಯ ಮಾಡಿವೆ. ಶೇಖಪ್ಪನ ಉಪಾಯ ಸುತ್ತಮುತ್ತಲಿನ ರೈತರಿಗೂ ಆಶ್ಚರ್ಯ ತಂದಿದೆ.
ಇದನ್ನೂ ಓದಿ : – ಬಿಜೆಪಿ ಮುಂದೆ ಪ್ರಾದೇಶಿಕ ಪಕ್ಷಗಳು ಗುಲಾಮರಂತೆ ನಿಲ್ಲಬೇಕಾ ? – ಕುಮಾರಸ್ವಾಮಿ ಪ್ರಶ್ನೆ