ಉದಯಪುರ (Udaipur) ದಲ್ಲಿ ಕನ್ಹಯ್ಯ ಲಾಲ್ (Kanhaiyah lal) ಹತ್ಯೆ ಖಂಡಿಸಿ ಶಾಸಕ ಎಂ ಪಿ ರೇಣುಕಾಚಾರ್ಯ (MP.Renukacharya) ಪ್ರತಿಭಟನೆ ನಡೆಸಿದ್ರು. ದಾವಣಗೆರೆ (Davangere) ಯಲ್ಲಿ ಮಾತನಾಡಿದ ಅವರು ಪಾಕಿಸ್ತಾನ (Pakistan)ದಲ್ಲಿ ತರಬೇತಿ ಪಡೆದು ಭಯೋತ್ಪಾದಕರು ಕನ್ಹಯ್ಯ ಲಾಲ್ ನ ಹತ್ಯೆ ಮಾಡಿ ಪ್ರಧಾನಿಗಳಿಗೆ ಧಮ್ಕಿ ಹಾಕಿದ್ದಾರೆ.
ಅವರನ್ನು ಗುಂಡಿಕ್ಕಿ ಕೊಂದಾಗ ಮಾತ್ರ ಹತ್ಯೆಯಾದ ಹಿಂದೂಗಳ ಆತ್ಮಕ್ಕೆ ಶಾಂತಿ ಸಿಗುತ್ತೆ. ಕೊಲೆ ಬೆದರಿಕೆ ಇದೆ ಎಂದು ಗೊತ್ತಿದ್ದರು ರಾಜಸ್ಥಾನ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಕೂಡಲೇ ರಾಷ್ಟ್ರಪತಿ ಗಳಿಗೆ ಮನವಿ ಮಾಡುತ್ತೇವೆ, ಕೂಡಲೇ ರಾಜಸ್ಥಾನ ಸರ್ಕಾರವನ್ನು ವಜಾ ಮಾಡಬೇಕು. ಹಿಂದೂಗಳನ್ನ ಹಗುರವಾಗಿ ಕಾಣುತ್ತಿದ್ದಾರೆ, ಅಂತವರ ಬಗ್ಗೆ ನಾವು ಎಚ್ಚರಿಕೆ ನೀಡಬೇಕು ಎಂದು ಮನವಿ ಮಾಡುತ್ತೇವೆ. ಅನ್ನ ನೀರು ಇಲ್ಲೆ ತಿಂದು ಕುಡಿದು ಪಾಕಿಸ್ತಾನ ಕ್ಕೆ ಜೈಕಾರ ಹಾಕುತ್ತಾರೆ. ಹುಬ್ಬಳ್ಳಿ ಯಲ್ಲಿ ಮೌಲ್ವಿಗಳೇ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ತಿಳಿಸಿದರು.
ಹತ್ಯೆ ಮಾಡಿದ ಹಂತಕರು ಬಿಜೆಪಿ ಕಾರ್ಯಕರ್ತರು ಎನ್ನುವ ವಿಚಾರಕ್ಕೆ ಎಂ ಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ವಿಷಯಾಂತರ ಮಾಡಬೇಕು ಎಂದು ಕಾಂಗ್ರೆಸ್ ನವರು ಈ ರೀತಿ ಕ್ರಿಯೇಟ್ ಮಾಡಿದ್ದಾರೆ. ಸಿದ್ದರಾಮಯ್ಯ ಡಿಕೆಶಿ (DK.Shivkumar) ರಾಹುಲ್ ಗಾಂಧಿ (Rahul gandhi) ಹಿಂದುಗಳ ಪರವಾಗಿ ಇದ್ದೀವಿ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಇದೇ ವೇಳೆ ಸಿದ್ದರಾಮೋತ್ಸವದ ಬಗ್ಗೆ ನಾನು ಟೀಕೆ ಮಾಡೋದಿಲ್ಲ, ಅದು ಅವರ ವೈಯಕ್ತಿಕ ಕಾರ್ಯಕ್ರಮ. ಮುಳುಗಿದ ಹಡಗಿಗೆ ನಾವಿಕ ನಾನೇ ಆಗಬೇಕು ಎನ್ನುತ್ತಿದ್ದಾರೆ. ನಾನು ಮುಂಚೂಣಿಯಲ್ಲಿ ಇರಬೇಕು ಎಂದು ಪೈಪೋಟಿ ನಡೆಸುತ್ತಿದ್ದಾರೆ. ಇದನ್ನೂ ಓದಿ : – PSI ಅಕ್ರಮ ನೇಮಕಾತಿ ಪ್ರಕರಣ – ಎಡಿಜಿಪಿ ಅಮೃತ್ ಪಾಲ್ ಬಂಧನ
ಪರಿಷತ್ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ ಯನ್ನು ಬಲಿ ಪಶು ಮಾಡಿದ್ದಾರೆ. ಸಿದ್ದರಾಮಯ್ಯ ನವರ ಮನಸ್ಸು ಕಾಂಗ್ರೆಸ್ ನಲ್ಲಿ ಇಲ್ಲ. ಹಲವು ಬಾರಿ ವೇದಿಕೆ ಮೇಲೆ ಕಾಂಗ್ರೆಸ್ ಅನ್ನು ಕಿತ್ತೋಗೆಯಬೇಕು ಎಂದು ಹೇಳಿದ್ದಾರೆ. ಅವರ ದೇಹ ಮಾತ್ರ ಕಾಂಗ್ರೆಸ್ ನಲ್ಲಿ ಇದೆ, ಕಾಂಗ್ರೆಸ್ ಬಿಟ್ಟು ಬೇರೆ ಕಡೆ ಹೋಗುವ ಯೋಚನೆ ಮಾಡಿ ಎಂದು ರೇಣುಕಾಚಾರ್ಯ ತಿಳಿಸಿದ್ರು.ಕಾಂಗ್ರೆಸ್ ಗೆ ಬಿಜೆಪಿ ಶಾಸಕರು ಸೇರ್ಪಡೆಯಾಗುತ್ತಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ. ಬಿಜೆಪಿಯಲ್ಲಿ ಒಬ್ಬೊಬ್ಬರು ಸಿಂಹದ ಮರಿಗಳು, ಮುಳುಗಿದ ಹಡಗಿಗೆ ಯಾರು ಹತ್ತಲು ಹೋಗುತ್ತಾರೆ ಹೇಳಿ . ಸಿದ್ದರಾಮಯ್ಯ ನವರನ್ನು ನಮ್ಮ ಪಕ್ಷಕ್ಕೆ ಎಳೆಯುವ ಪ್ರಯತ್ನ ಇಲ್ಲ.
ನಮ್ಮಲ್ಲಿಯೇ ಮುಖಂಡರು ಸಾಕಷ್ಟು ಜನರಿದ್ದಾರೆ, ಯಡಿಯೂರಪ್ಪ, ಬೊಮ್ಮಾಯಿ, ಕಟೀಲ್ ಸೇರಿದಂತೆ ಹಲವು ನಾಯಕರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ (Siddaramaiah) ನವರು ಒಳ್ಳೆಯ ಆಡಳಿತ ನೀಡಿದ್ದಾರೆ ಎಂದು ರೇಣುಕಾಚಾರ್ಯ ಹೊಗಳಿದ್ದಾರೆ. ಇದನ್ನೂ ಓದಿ : – ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ- ಅದಕ್ಕೆ ಹೇಳಿದೆಲ್ಲ ಉಲ್ಟಾ ಆಗ್ತಿದೆ – ಸಿ.ಟಿ ರವಿ