ಚಾಮರಾಜಪೇಟೆ ಈದ್ಗಾ (eidaga ground) ಮೈದಾನ ಈಗ ವಿವಾದಿತ ಕೇಂದ್ರವಾಗಿದೆ. ಮೈದಾನದಲ್ಲಿ ಕುರಿ ಮೇಕೆ ಮಾರಾಟ ಮಾಡಿರೋದಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಇದಕ್ಕೂ ಬಿಬಿಎಂಪಿಗೂ ಸಂಬಂಧ ಇಲ್ಲ ಎಂದು ಬಿಬಿಎಂಪಿ (bbmp) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (thushar girinath) ನುಣುಚಿಕೊಂಡಿದ್ದಾರೆ.
ಕುರಿ, ಮೇಕೆ ಮಾರಾಟದಿಂದ ಆಗಿರುವ ತ್ಯಾಜ್ಯವನ್ನು ಬಿಬಿಎಂಪಿ ಕ್ಲೀನ್ ಮಾಡೋದಿಲ್ಲ . ವಿವಾದ ಕೋರ್ಟ್ ನಲ್ಲಿ ಇರುವುದರಿಂದ ನಾವು ಮೈದಾನದ ವಿಚಾರಕ್ಕೆ ಈಗ ಎಂಟ್ರಿಯಾಗಲ್ಲ. ಹೀಗಾಗಿ ಕುರಿ, ಮೇಕೆ ಸಂತೆಯಿಂದ ಆಗಿರುವ ಗಲೀಜನ್ನು ಪಾಲಿಕೆ ಸ್ವಚ್ಛ ಮಾಡಲ್ಲ ಎಂದು ಹೇಳಿದ್ರು. ಜುಲೈ 10ಕ್ಕೆ ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಮಾತನಾಡಿದ ತುಷಾರ್ ಗಿರಿನಾಥ್ ಹಬ್ಬದ ಪ್ರಾರ್ಥನೆಗೆ ರಸ್ತೆ ಕ್ಲೋಸ್ ಮಾಡುವುದು. ಟ್ರಾಫಿಕ್ ಸಿಗ್ನಲ್ ನಲ್ಲಿ ಚಾಪೆ ಹಾಸುವುದಕ್ಕೆ ಅವಕಾಶ ಇಲ್ಲ. ಪೊಲೀಸ್ ಇಲಾಖೆಯೊಂದಿಗೆ ಈ ಬಗ್ಗೆ ಮಾತನಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ರು. ಇದನ್ನೂ ಓದಿ : – BBMP ವಾರ್ಡ್ ಗಳ ಸಂಖ್ಯೆ 243ಕ್ಕೆ ಏರಿಕೆ – ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ
ಟ್ರಾಫಿಕ್ ಸಿಗ್ನಲ್ ನಲ್ಲಿ ಭಿಕ್ಷಾಟನೆ ವಿಚಾರ
ನಗರದ ಹಲವೆಡೆ ಬಿಬಿಎಂಪಿ 720 ಜನರನ್ನು ಭಿಕ್ಷಾಟನೆಯಿಂದ ರಕ್ಷಣೆ ಮಾಡಿದೆ. ಹಲವು ಸಂಘ ಸಂಸ್ಥೆಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ವಿಶೇಷ ಡ್ರೈವ್ ಮಾಡಿ 720 ಜನರ ರಕ್ಷಣೆ ಮಾಡಲಾಗಿದೆ. ನಗರದಲ್ಲಿ ಭಿಕ್ಷಾಟನೆ ಜಾಲ ಭೇಧಿಸಲು ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಇದನ್ನು ಓದಿ : – ಚಂದ್ರಶೇಖರ್ ಗುರೂಜಿಗೆ ಬ್ಲಾಕ್ ಮೇಲ್ ಮಾಡಿ ಸುಲಿಗೆಗೆ ಇಳಿದಿದ್ರಾ ಹಂತಕರು..!