ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ (Chandrashekar guruji) ಯ ಅಂತ್ಯ ಸಂಸ್ಕಾರ ಹುಬ್ಬಳ್ಳಿ (Hubballi) ಸುಳ್ಳ ಗ್ರಾಮದ ರಸ್ತೆಯಲ್ಲಿ ಇರುವ ಗುರೂಜಿ ಜಮೀನಿನಲ್ಲಿಯೇ ನಡೆಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಸಾರ್ವಜನಿಕರು, ಕುಟುಂಬಸ್ಥರು ಸೇರಿದಂತೆ ಎಲ್ಲರೂ ಗುರೂಜಿ ಅಂತಿಮ ದರ್ಶನ ಪಡೆದರು. ಇದೇ ವೇಳೆ ಗುರೂಜಿ ಮುದ್ದಿನ ಶ್ವಾನ ಪ್ರಿನ್ಸ್ ಕೂಡ ಯಜಮಾನನ ಅಂತಿಮ ದರ್ಶನ ಪಡೆಯಿತು.
ಶವಪೆಟ್ಟಿಗೆ ಮೇಲೆ ಕುಳಿತು ದುಃಖ ಹೊರಹಾಕಿತ್ತು. ಅಲ್ಲದೆ ಗುರೂಜಿ ಬಿಟ್ಟು ಹೋಗಲಾರೆ ಎಂದು ಶ್ವಾನ ಹಠ ಮಾಡಿರುವುದು ನೆರೆದವರ ಕಣ್ಣಂಚಲ್ಲಿ ನೀರು ತರಿಸಿತು. ಇದನ್ನೂ ಓದಿ : – ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಕ್ವಿ ರಾಜೀನಾಮೆ – NDA ಉಪರಾಷ್ಟ್ರಪತಿ ಅಭ್ಯರ್ಥಿಯಾಗೋ ಸಾಧ್ಯತೆ
ಮಣ್ಣಲ್ಲಿ ಮಣ್ಣಾದ ಚಂದ್ರಶೇಖರ್ ಗುರೂಜಿ
ಗುರೂಜಿ ಅವರ ಅಣ್ಣನ ಮಗ ಸಂಜಯ ಅಂಗಡಿ ಯಿಂದ ಗುರೂಜಿಯವರ ಅಂತಿಮ ವಿಧಿ ವಿಧಾನ ನಡೆಸಲಾಯಿತು. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು. ನಿಡಸೋಶಿ ಸಂಸ್ಥಾನಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನ ಮಾಡಲಾಯಿತು.
ಈ ವೇಳೆ ಅವರ ಪತ್ನಿ ಅಂಕಿತಾ, ಮಗಳು ಸ್ವಾತಿ ಹಾಗೂ ಸರಳ ವಾಸ್ತು ಸಂಸ್ಥೆಯ ಉದ್ಯೋಗಿಗಳ ಅಕ್ರಂದನ ಮುಗಿಲು ಮುಟ್ಟಿತ್ತು. ವೀರಶೈವ ಲಿಂಗಾಯತ ವಿಧಿ ವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿತು. 10 ಸ್ವಾಮೀಜಿಗಳು ಅಂತ್ಯ ಕ್ರಿಯೆಯನ್ನು ನಡೆಸಿ ಕೊಟ್ಟರು. ಪಂಚಾಕ್ಷರಿ ಮಂತ್ರ, ಮಂಗಳಾರತಿ ಬಳಿಕ ಮೃತ ದೇಹದ ಹಣೆಗೆ ವಿಭೂತಿ ಧಾರಣೆ ಮಾಡಿ ಅವರ ಪಾದದ ಮೇಲೆ ಸ್ವಾಮೀಜಿಗಳು ಪಾದ ಇಟ್ಟು ಪೂಜೆ ನಡೆಸಿದರು.
ಅಷ್ಟ ದಿಕ್ಕುಗಳಲ್ಲಿ ಮಹಾಂತ್ರ ಬರೆದು ಇಡಲಾಯಿತು. ಕೊನೆಯಲ್ಲಿ ಪುಷ್ಪಾರ್ಚನೆ ಅಂತ್ಯ ಕ್ರಿಯೆಯ ವಿಧಿ ವಿಧಾನ ಮುಗಿಸಲಾಯಿತು. ಇದಕ್ಕೂ ಮುನ್ನ ಸಮಾಧಿ ಸ್ಥಳದಲ್ಲಿ ಗುರೂಜಿ ಅವರ ಅಕ್ಕ ಕಣ್ಣೀರಿಡುತ್ತಲೇ ಮೂರ್ಛೆ ಹೋದ ಘಟನೆಯೂ ನಡೆಯಿತು. ಗುರೂಜಿಯ ಅಂತ್ಯ ಕ್ರಿಯೆಯಲ್ಲಿ ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್, ನಿಡುಮಾಮಿಡಿ ಶ್ರೀಗಳು ಭಾಗಿಯಾಗಿದ್ದರು.
ಇದನ್ನೂ ಓದಿ : – SARALA VASTU – ಭಕ್ತರ ಸೋಗಿನಲ್ಲಿ ಬಂದು ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಭೀಕರ ಹತ್ಯೆ