540 ಪಿಎಸ್ಐ ಹುದ್ದೆಗಳ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಐಪಿಎಸ್ (ips) ಅಧಿಕಾರಿ ಅಮೃತ್ ಪಾಲ್ ಫಾರ್ಮ್ ಹೌಸ್ ನಲ್ಲಿ ಸಿಐಡಿ (cid) ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಪ್ರಕರಣ ವಿಚಾರಣಾ ಹಂತದಲ್ಲಿರುವಂತೆಯೇ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ರಾಷ್ಟ್ರೀಯ ಹೆದ್ದಾರಿ 234ರ ಮಧ್ಯೆ ಇರುವ ಅಮೃತ್ ಪೌಲ್ ಅವರ ಫಾರ್ಮ್ ಹೌಸ್ ಗೆ ಸಿಐಡಿ ಅಧಿಕಾರಿಗಳು ಧಿಡೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ತೋಟದ ಮನೆಯ ಬಳಿ ಇರುವ ಸರ್ವೇ ನಂ 243/4 .247/3 .247/5 ರಲ್ಲಿರುವ ಮೂರುವರೆ ಎಕರೆ ಕೃಷಿ ಜಮೀನು ನೆಟರಾಮ್ ಬನ್ಸಾಲ್ ಎಂಬುವರ ಹೆಸರಲ್ಲಿ ಇದೆ.
ಇದು ಬೇನಾಮಿ ಆಸ್ತಿ ಎಂಬ ಶಂಕೆ ವ್ಯಕ್ತವಾಗಿದೆ. ಇಲ್ಲಿ ಪಾಲ್ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಫಾರ್ಮ್ ಹೌಸ್ ನಿರ್ಮಿಸಿದ್ದಾರೆ ಎನ್ನಲಾಗಿದೆ. ಅಕ್ರಮ ಆಸ್ತಿ ಗಳಿಸಿರುವ ಹಿನ್ನೆಲೆಯಲ್ಲಿ ಸಿಐಡಿ ಡಿವೈಎಸ್ಪಿ ವೀರೇಂದ್ರ ಕುಮಾರ್ ನೇತೃತ್ವದ ತಂಡ ತೀವ್ರ ಪರಿಶೀಲನೆ ನಡೆಸಿದ್ರು ಯಾವುದೇ ದಾಖಲೆ ಸಿಗದ ಕಾರಣ ಸಿಐಡಿ ಅಧಿಕಾರಿಗಳ ತಂಡ ಬರಿಗೈಯಲ್ಲಿ ವಾಪಾಸ್ಸಾಗಿದೆ.
ಇದನ್ನು ಓದಿ :- PSI ಅಕ್ರಮ ನೇಮಕಾತಿ ಪ್ರಕರಣ – ಎಡಿಜಿಪಿ ಅಮೃತ್ ಪಾಲ್ ಬಂಧನ