ಪಂಜಾಬ್ ಮುಖ್ಯಮಂತ್ರಿ (Punjab chief minister) ಭಗವಂತ್ ಮಾನ್ (Bhagwanth maan) ಇಂದು ಡಾ. ಗುರ್ಪ್ರೀತ್ ಕೌರ್ (Gupreeth kaur) ಅವರನ್ನು ಮದುವೆಯಾಗಿದ್ದಾರೆ. ಇದು ಅವರ ಎರಡನೇ ಮದುವೆ (Second marraige) ಯಾಗಿದೆ. ತಮಗಿಂತ 16 ವರ್ಷ ಕಿರಿಯರಾದ ವೈದ್ಯೆ ಗುರ್ಪ್ರೀತ್ ಕೌರ್ ಅವರನ್ನು ಚಂಡೀಗಡದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವರಿಸಿದ್ದಾರೆ.
48 ವರ್ಷದ ಭಗವಂತ್ ಮಾನ್ ಮತ್ತು 32 ವರ್ಷದ ಡಾ. ಗುರ್ಪ್ರೀತ್ ಕೌರ್ ಅವರ ಮದುವೆ ಬಹಳ ಸರಳವಾಗಿ ನಡೆಯಿತು. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಎಎಪಿ ನಾಯಕ ರಾಘವ ಛಡ್ಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭಗವಂತ್ ಮಾನ್ ಮದುವೆ ಚಿತ್ರವನ್ನು ರಾಘವ ಛಡ್ಡಾ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. “ಮಾನ್ ಸಾಹೇಬರಿಗೆ ಅಭಿನಂದನೆಗಳು” ಎಂದು ಅವರು ಹಾರೈಸಿದ್ದಾರೆ.
ಸಿಖ್ಖರ ‘ಆನಂದ್ ಖರಾಜ್’ಗೆ ಅನುಗುಣವಾಗಿ ಗುರುದ್ವಾರದಲ್ಲಿ ವಿವಾಹ ಆಚರಣೆ ನೆರವೇರಿದೆ. ಮದುವೆ ಪ್ರಯುಕ್ತ ಭಗವಂತ್ ಮಾನ್ ಅವರ ನಿವಾಸದಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿದೆ.
ಮದುವೆ ಸಮಾರಂಭಕ್ಕೆ ಭಾರತೀಯ ಮತ್ತು ಇಟಾಲಿಯನ್ ಮಾದರಿ ಅಡುಗೆಗಳನ್ನು ತಯಾರಿಸಲಾಗಿದೆ. ಮದುವೆ ಹಿನ್ನೆಲೆಯಲ್ಲಿ ಸಿಎಂ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಇದನ್ನೂ ಓದಿ : – ಟೈಲರ್ ಕನ್ಹಯ್ಯ ಲಾಲ್ ಮಕ್ಕಳಿಗೆ ಸರ್ಕಾರಿ ಉದ್ಯೋಗ- ರಾಜಸ್ಥಾನ ಸರ್ಕಾರ ಘೋಷಣೆ
ಭಗವಂತ್ ಮಾನ್ 2015ರಲ್ಲಿ ತಮ್ಮ ಮೊದಲ ಪತ್ನಿ ಇಂದರ್ಪ್ರೀತ್ ಕೌರ್ (Indrapreeth kaur) ಅವರಿಂದ ವಿಚ್ಛೇದನ ಪಡೆದಿದ್ದರು. ಅವರಿಗೆ ಸೀರತ್ ಕೌರ್ (Seerath kaur) (21) ಮತ್ತು ದಿಲ್ಶಾನ್ (17) ಎಂಬ ಇಬ್ಬರು ಮಕ್ಕಳಿದ್ದಾರೆ. ಇಂದರ್ಪ್ರೀತ್ ಅವರು ಮಕ್ಕಳ ಜತೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಮಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಇಬ್ಬರೂ ಮಕ್ಕಳು ಹಾಜರಾಗಿದ್ದರು. ಇದನ್ನೂ ಓದಿ : – ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗೆ ನಾಳೆ 2ನೇ ಮದುವೆ…!