ನನ್ನ ಜನ್ಮದಿನದ ಉತ್ಸವದ ಬಗ್ಗೆ ನಮ್ಮವರಿಗೆ ಭಯವಿಲ್ಲ, ಅದೆಲ್ಲಾ ಸುಳ್ಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅಭಿಪ್ರಾಯಪಟ್ಟಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸಿದ್ದರಾಮೋತ್ಸವ (Siddaramotsava) ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಯವರಿಗೆ ಹೆದರಿಕೆ ಆಗಿದೆ.
ಲಕ್ಷಾಂತರ ಜನ ಸೇರ್ತಾರೆ, ಸೋಲಿನ ಭಯ ಅವರಿಗೆ ಕಾಡ್ತಿದೆ ಎಂದರು. ಈ ಹಿಂದೆ ಯಡಿಯೂರಪ್ಪ (Yediyurappa) ಜನ್ಮದಿನ ಮಾಡಿಕೊಂಡಿದ್ದರು. ಆಗ ನಾನು ಕೂಡಾ ಹೋಗಿದ್ದೆ ಎಂದ ಸಿದ್ದರಾಮಯ್ಯ, ನನ್ನ ಹುಟ್ಟು ಹಬ್ಬ ಮಾಡಿಕೊಂಡೆರೆ ಅವರಿಗೇಕೆ ಭಯ ಎಂದು ಪ್ರಶ್ನಿಸಿದರು.
ಅಮೃತ್ ಪೌಲ್ ಗೆ ಮಂಪರು ಪರೀಕ್ಷೆ ಮಾಡಿ
ಪಿಎಸ್ಐ ನೇಮಕಾತಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕೇವಲ ಅಧಿಕಾರಿಗಳನ್ನು ಬಂಧಿಸಿದ್ರೆ, ವಿಚಾರಣೆ ಮಾಡಿದ್ರೆ ಸಾಲದು. ಅಮೃತ್ ಪೌಲ್ (Amruth paul) , ಶಾಂತ್ ಕುಮಾರ್ಗೆ ಮಂಪರು ಪರೀಕ್ಷೆ ಮಾಡಿಸಬೇಕು. ಅನೇಕರ ಹೆಸರು ಹೇಳದಂತೆ ಅವರ ಮೇಲೆ ಒತ್ತಡ ಇದೆ. ನಮ್ಮ ಕಾಲದಲ್ಲಿ ಅಕ್ರಮವಾಗಿದೆ ಅಂತ ಇದೀಗ ಅಶ್ವತ್ಥ್ ನಾರಾಯಣ (Ashwath narayan) ಹೇಳ್ತಿದ್ದಾರೆ. ಆಗ ಯಾಕೆ ಪ್ರಸ್ತಾಪ ಮಾಡಲಿಲ್ಲ, ಆಗ ಕಡ್ಲೇಪುರಿ ತಿಂತಿದ್ರಾ..? ಎಂದು ಕೇಳಿದ್ರು. ಇದನ್ನೂ ಓದಿ : – 2047ರಲ್ಲಿ ಭಾರತ ಇಸ್ಲಾಮಿಕ್ ದೇಶ !- ಉಗ್ರರು ಬಿಚ್ಚಿಟ್ಟರು ಭಯಾನಕ ಸಂಗತಿ
ದೇವನೂರು ಮಹಾದೇವ ಸತ್ಯ ಹೇಳಿದ್ದಾರೆ
ದೇವನೂರು ಮಹಾದೇವ (Devanuru mahadeva) ಅವರ ಆರೆಸ್ಸೆಸ್ ಆಳ ಅಗಲ ಪುಸ್ತಕ ವಿಚಾರಕ್ಕೆ ಪ್ರತಿಕ್ರಿಯಿಸಿ, ದಾಖಲಾತಿ ಸಮೇತ ದೇವನೂರು ಮಹಾದೇವ ಅವರು ಪುಸ್ತಕ ಬರೆದಿದ್ದಾರೆ. ಸತ್ಯ ಹೇಳಿದ್ರೆ ಅವರಿಗೆ ಕೋಪ ಬರುತ್ತದೆ. ಆರೆಸ್ಸೆಸ್ನವರಿಗೆ ಸತ್ಯ ಹೇಳಿದರೆ ಆಗಿಬರೋದಿಲ್ಲ. ಹೀಗಾಗಿ ಅವರ ಮೇಲೆ ಕೇಸ್ ಹಾಕಿಸ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರ್ತಾರೆ ಎಂದು ಆರೋಪಿಸಿದರು. ಇದನ್ನು ಓದಿ : – ಕೋಡಿಬಿದ್ದ ಇತಿಹಾಸ ಪ್ರಸಿದ್ಧ ಮದಗದಕೆರೆ..! ಇಲ್ಲಿದೆ ರಾಜ್ಯದ ಹಲವೆಡೆಯ ಮಳೆಯ ಸುದ್ದಿ…