ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ನೀಡಿದ ಪರಿಹಾರ ಧನ ಹಣವನ್ನೇ ಮಹಿಳೆ ಎಸೆದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ (Bagalkote) ಗೆ ಆಗಮಿಸಿದ ವೇಳೆ ಗಾಯಾಳುಗಳ ಸಂಬಂಧಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಗಾಯಾಳುಗಳಿಗೆ ನೀಡಿದ ಹಣವನ್ನೇ ಮರಳಿ ಸಿದ್ದರಾಮಯ್ಯಗೆ ನೀಡಲು ಸಂಬಂಧಿಗಳು ಮುಂದಾದ್ರು. ಈ ವೇಳೆ ಸಿದ್ದು ವಾಹನದಲ್ಲಿ ತೆರಳುತ್ತಿದ್ದಂತೆ ಹಣ ಹಿಡಿದೇ ವಾಹನದ ಹಿಂದೆ ಮಹಿಳೆ ಹೊರಟಿದ್ದಾರೆ. ಕೊನೆಗೆ 2 ಲಕ್ಷ ಹಣವನ್ನ ಪೊಲೀಸ್ ಬೆಂಗಾವಲು ವಾಹನಕ್ಕೆ ಮುಸ್ಲಿಂ (Women) ಮಹಿಳೆ ಎಸೆದಿದ್ದಾರೆ. ಇದನ್ನು ಓದಿ : – ಹೂವಿನ ಮಾಲೆಯಲ್ಲಿ ಹುಳು ಇರುತ್ತೆ – ಕಾರ್ಯಕರ್ತರ ಮೇಲೆ ಗರಂ ಆದ ಸಿದ್ದರಾಮಯ್ಯ
ಕೆರೂರು ಗುಂಪು ಘರ್ಷಣೆ ಗಾಯಾಳುಗಳ ಭೇಟಿಗೆ ಬಾಗಲಕೋಟೆಯ ಆಶೀರ್ವಾದ ಆಸ್ಪತ್ರೆಗೆ ಸಿದ್ದರಾಮಯ್ಯ ಆಗಮಿಸಿದ್ದರು. ಗಾಯಗೊಂಡ ಹನೀಫ್, ರಾಜೇಸಾಬ್, ರಫೀಕ್, ದಾವಲ್ ಮಲೀಕ್ ಅವರನ್ನ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ಈ ವೇಳೆ ಈ ಘಟನೆ ನಡೆದಿದೆ. ಕೆರೂರ ಗುಂಪು ಘರ್ಷಣೆಯಲ್ಲಿ ಚಾಕು ಇರಿತದಿಂದ ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಯಮನೂರ ಗಾಯಗೊಂಡಿದ್ದರು. ಜುಲೈ 6 ರಂದು ಕೆರೂರ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆಯಿಂದ ಚಾಕು ಇರಿತ ಆಗಿತ್ತು.
ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅರುಣ ಕಟ್ಟಮನಿ ಸೇರಿ ನಾಲ್ವರು ಗಾಯಗೊಂಡಿದ್ರು. ಘರ್ಷಣೆ ಬಳಿಕ ಮನೆಯ ಮೇಲೆ ದಾಳಿ ಹಾಗೂ ಜುಲೈ 8 ರಂದು ದಾಬಾ ಮೇಲೆ ದಾಳಿ ನಡೆದು ಮಾರಣಾಂತಿಕ ಹಲ್ಲೆ ನಡೆದಿತ್ತು. ಇದರಲ್ಲಿ ಐವರು ಮುಸ್ಲಿಂಮರು ಗಾಯಗೊಂಡಿದ್ರು. ಬಾಗಲಕೋಟೆ ಖಾಸಗಿ ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಎರಡು ಗುಂಪಿನ ಗಾಯಾಳುಗಳ ಭೇಟಿಗೆ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಮುಂದಾಗಿದ್ರು.
ಸಿದ್ದರಾಮಯ್ಯ ಭೇಟಿಗೆ ಹಿಂದೂ ಜಾಗರಣ ವೇದಿಕೆ ಗಾಯಾಳುಗಳು ನಿರಾಕರಿಸಿದರು. ಆಶೀರ್ವಾದ ಆಸ್ಪತ್ರೆಯಲ್ಲಿದ್ದ ಮುಸ್ಲಿಂ ಗಾಯಾಳುಗಳ ಭೇಟಿ ಮಾಡಿ ನಾಲ್ವರಿಗೆ ಎರಡು ಲಕ್ಷ ರೂ ಹಣವನ್ನು ಸಿದ್ದರಾಮಯ್ಯ ನೀಡಿದ್ದರು. ಕೊನೆಗೆ ನಿಮ್ಮ ಹಣ ಬೇಡ ನಮಗೆ ಶಾಂತಿ ಬೇಕು, ಹಿಂದೂ ಮುಸ್ಲಿಂ ಇಬ್ಬರೂ ನೆಮ್ಮದಿಯಿಂದ ಬದುಕುವ ವಾತಾವರಣ ಬೇಕು ಎಂದು ಅಳುತ್ತಲೇ ಸಿದ್ದು ವಾಹನಕ್ಕೆ ದುಡ್ಡು ಎಸೆದು ಮುಸ್ಲಿಂ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : – ಇಂದಿನಿಂದ 75 ದಿನಗಳವರೆಗೆ ಎಲ್ಲಾ ವಯಸ್ಕರಿಗೆ ಉಚಿತ ಕೋವಿಡ್ ಬೂಸ್ಟರ್ ಡೋಸ್