ಜನಾಕ್ರೋಶಕ್ಕೆ ಮಣಿದ ಕೇಂದ್ರ ಸರ್ಕಾರ – ಅಕ್ಕಿ, ಮೊಸರು ಸೇರಿದಂತೆ 14 ವಸ್ತುಗಳ ಮೇಲೆ GST ವಿನಾಯಿತಿ – ಷರತ್ತುಗಳು ಅನ್ವಯ

ಜನಾಕ್ರೋಶಕ್ಕೆ ಕೇಂದ್ರ ಸರ್ಕಾರ ( centerl goverment ) ಮಣಿದಿದೆ. ಅಕ್ಕಿ, ಗೋಧಿ ಸೇರಿದಂತೆ 14 ವಸ್ತುಗಳಿಗೆ GST ಹೇರುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ( nirmala seethraman) ಗೋಧಿ, ಮೊಸರು, ಅಥವಾ ಲಸ್ಸಿ, ಅಕ್ಕಿ, ಓಟ್ಸ್, ಹಿಟ್ಟು, ತೊಗರಿಬೆಳೆ, ಮಂಡಕ್ಕಿ, ರವೆ, ಜೋಳ, ಸಣ್ಣ ಗೋಧಿಗಳ ಮೇಲಿನ ಜಿಎಸ್ಟಿ ವಿನಾಯಿತಿಯನ್ನು ನೀಡಲಾಗಿದೆ. ಆದರೆ ಇದಕ್ಕೆ ಕಲವೊಂದು ಷರತ್ತು ವಿಧಿಸಲಾಗದೆ. ಈ ಎಲ್ಲಾ ವಸ್ತುಗಳ ಮೇಲೆ ಲೇಬಲ್ ಇದ್ದರೇ ಅಥವಾ ಪ್ಯಾಕ್ ಮಾಡಿದರೆ ಜಿಎಸ್ಟಿ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಬಿಡಿಯಾಗಿ ಮಾರಿದಾಗ ಜಿಎಸ್ಟಿ ಅನ್ವಯವಾಗದೇ ಇರುವ ವಸ್ತುಗಳ ಪಟ್ಟಿ ಇಲ್ಲಿದೆ
ದ್ವಿದಳ ಧಾನ್ಯ/ ಬೇಳೆ
ಗೋಧಿ
ಸಣ್ಣ ಗೋಧಿ
ಓಟ್ಸ್
ಮೈದಾ
ಅಕ್ಕಿ
ಗೋಧಿ ಹಿಟ್ಟು
ಸೂಜಿ/ ರವಾ
ಕಡಲೆ ಹಿಟ್ಟು
ಮಂಡಕ್ಕಿ
ಮೊಸರು/ ಲಸ್ಸಿ

ಈ ನಿರ್ಧಾರದಲ್ಲಿ ಸಭೆಯಲ್ಲಿದ್ದ ಬಿಜೆಪಿ( bjp )ಯೇತರ ರಾಜ್ಯಗಳಾದ ಪಂಜಾಬ್, ಛತ್ತೀಸ್ಗಢ, ರಾಜಸ್ಥಾನ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ಎಲ್ಲಾ ರಾಜ್ಯಗಳು ಈ ನಿರ್ಧಾರವನ್ನು ಒಪ್ಪಿಕೊಂಡಿವೆ. ಜಿಎಸ್ಟಿ (gst )ಕೌನ್ಸಿಲ್ನ ಈ ನಿರ್ಧಾರವು ಮತ್ತೊಮ್ಮೆ ಒಮ್ಮತದಿಂದ ಬಂದಿದೆ ಎಂದು ಜಿಎಸ್ಟಿ ದರ ಏರಿಕೆಯ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

ಇದನ್ನು ಓದಿ : – ಇಂದಿನಿಂದ GST ಬರೆ – ಯಾವ ವಸ್ತುಗಳ ಮೇಲೆ ಹೆಚ್ಚಾಗಲಿದೆ ತೆರಿಗೆ?

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!