ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!

ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂ (England cricket stadium) ಗೆ ಭಾರತೀಯ ಕ್ರಿಕೆಟಿಗನ ಹೆಸರಿಡಲಾಗಿದೆ. ಆ ಕ್ರಿಕೆಟಿಗ ಸಚಿನ್ ಅಲ್ಲ…ಕಪಿಲ್ (Kapil dev) ಅಲ್ಲ…ಮತ್ಯಾರು ಗೊತ್ತಾ..? ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil gavaskar) . ಗವಾಸ್ಕರ್ ವಿಶ್ವ ಕ್ರಿಕೆಟ್ ನಲ್ಲಿ ಚಿರಪರಿಚಿತ ಹೆಸರು.

ಟೆಸ್ಟ್ ಕ್ರಿಕೆಟ್ ನಲ್ಲಿ 10,000 ರನ್ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ಲಿಟ್ಲ್ ಮಾಸ್ಟರ್ ಗವಾಸ್ಕರ್ ಹೆಸರಿನಲ್ಲಿದೆ. ಕ್ರಿಕೆಟ್ ಲೋಕದಲ್ಲಿ ಲಿಟ್ಲ್ ಮಾಸ್ಟರ್ (Little master) ಎಂದೇ ಖ್ಯಾತರಾದ ಸುನಿಲ್ ಗವಾಸ್ಕರ್ ಮಾರ್ಚ್ 7, 1987 ರಂದು ಟೆಸ್ಟ್ ಕ್ರಿಕೆಟ್ ನಲ್ಲಿ 10,000 ರನ್ ಗಳಿಸಿದ ದಾಖಲೆ ಬರೆದಿದ್ದರು. ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಇದಾದ ಬಳಿಕವಷ್ಟೇ ಸಚಿನ್ ತೆಂಡೂಲ್ಕರ್ (Sachin tendulkar) , ರಿಕಿ ಪಾಂಟಿಂಗ್, ಜಾಕ್ವೆಸ್ ಕಾಲಿಸ್ ಮತ್ತು ಬ್ರಿಯಾನ್ ಲಾರಾ (Briyan lara) ಸೇರಿದಂತೆ ಅನೇಕ ಬ್ಯಾಟ್ಸ್ ಮ್ಯಾನ್ ಗಳು ಈ ರನ್ ಗಳ ಶಿಖರ ಮುಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತೀಯ ದಂತಕಥೆಯ ಈ ಸಾಧನೆಯನ್ನುಗಮನದಲ್ಲಿಟ್ಟುಕೊಂಡು, ಇಂಗ್ಲೆಂಡ್ ನ ಲೀಸೆಸ್ಟರ್ ಕ್ರಿಕೆಟ್ ಕ್ಲಬ್ ಸುನಿಲ್ ಗವಾಸ್ಕರ್ ಅವರಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದೆ. ಇದನ್ನೂ ಓದಿ :- ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್..!

ಅದು ಅಂತಿಂಥ ಗೌರವವಲ್ಲ, ಬದಲಾಗಿ ಲೀಸೆಸ್ಟರ್ ಕ್ಲಬ್ ತನ್ನ ಸ್ಟೇಡಿಯಂಗೆ ಗವಾಸ್ಕರ್ ಹೆಸರಿಡಲಿದೆ. ಇಂಗ್ಲೆಂಡಿನ ಇತಿಹಾಸದಲ್ಲಿ ಭಾರತೀಯ ಕ್ರಿಕೆಟಿಗರೊಬ್ಬರ ಹೆಸರನ್ನು ಕ್ರೀಡಾಂಗಣಕ್ಕೆ ಇಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಲೀಸೆಸ್ಟರ್ ಸ್ಟೇಡಿಯಂಗೆ ಗವಾಸ್ಕರ್ ಹೆಸರಿಡುವ ಅಭಿಯಾನ ಆರಂಭಿಸಿದ್ದು, ಭಾರತೀಯ ಮೂಲದ ಇಂಗ್ಲೆಂಡ್ನ ಸಂಸತ್ ಸದಸ್ಯ ರಾಹೆ ಕೀತ್ ವಾಜ್ (Rahe kith vaj) . ಇವರು ಸುದೀರ್ಘ ಕಾಲದಿಂದಲೂ ಸಂಸದರಾಗಿ ಲೀಸೆಸ್ಟರ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಲೀಸೆಸ್ಟರ್ ಭಾರತದ ಕ್ರಿಕೆಟ್ ದಂತಕಥೆಗೆ ಗೌರವ ಸೂಚಿಸಲು ಕ್ರೀಡಾಂಗಣದ ಹೆಸರನ್ನೇ ಬದಲಿಸಲು ಮುಂದಾಗಿದೆ. ಇಂಗ್ಲೆಂಡ್ನಲ್ಲಿ ಸಿಕ್ಕಿರುವ ಈ ವಿಶೇಷ ಗೌರವದಿಂದ ಗವಾಸ್ಕರ್ ಕೂಡ ತುಂಬಾ ಸಂತೋಷಗೊಂಡಿದ್ದಾರೆ. ಲೀಸೆಸ್ಟರ್ ನಲ್ಲಿ ನನ್ನ ಹೆಸರನ್ನು ಒಂದು ಕ್ರೀಡಾಂಗಣಕ್ಕೆ ಇಡುತ್ತಿರುವುದು ನನಗೆ ತುಂಬಾ ಸಂತೋಷ ಮತ್ತು ಗೌರವವಾಗಿದೆ.

ಲೀಸೆಸ್ಟರ್ ಪ್ರಬಲ ಕ್ರೀಡಾ ಅಭಿಮಾನಿಗಳನ್ನು ಹೊಂದಿರುವ ನಗರವಾಗಿದೆ. ವಿಶೇಷವಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಹಾಗಾಗಿ ಇದು ನಿಜಕ್ಕೂ ದೊಡ್ಡ ಗೌರವ ಎಂದು ಲಿಟ್ಲ್ ಮಾಸ್ಟರ್ ಹೇಳಿದ್ದಾರೆ. ವಿಶೇಷ ಎಂದರೆ ಸುನಿಲ್ ಗವಾಸ್ಕರ್ ಹೆಸರನ್ನು ವಿದೇಶಗಳ ಕ್ರೀಡಾಂಗಣಕ್ಕೆ ಇಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಇದಕ್ಕೂ ಮುಂಚೆಯೇ ಅಮೇರಿಕದ ಕೆಂಟುಕಿ ಮತ್ತು ತಾಂಜಾನಿಯಾದಲ್ಲಿ ಕ್ರೀಡಾಂಗಣಗಳಿಗೆ ಅವರ ಹೆಸರನ್ನು ಇಡಲಾಗಿದೆ.

ಇದನ್ನೂ ಓದಿ :- ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ​ಶಿಪ್ ಫೈನಲ್ ​​ಗೆ ನೀರಜ್ ಚೋಪ್ರಾ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!