ಪ್ರೇಕ್ಷಕರ ಮುಂದೆ ಜೆರ್ಸಿ ಬಿಚ್ಚಿ ಸಂಭ್ರಮಿಸಿದ ಇಂಗ್ಲೆಂಡ್ ಫುಟ್ಬಾಲ್ ಆಟಗಾರ್ತಿ! ವಿಡಿಯೋ ವೈರಲ್

UEFA ಮಹಿಳಾ ಯುರೋ 2022 ಫೈನಲ್ನಲ್ಲಿ ಇಂಗ್ಲೆಂಡ್ (UEFA ) ಮಹಿಳಾ ತಂಡ ಜರ್ಮನಿ (GERMANY) ತಂಡವನ್ನ ಸೋಲಿಸಿ ಪಂದ್ಯವನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

ಇಂಗ್ಲೆಂಡ್ನ ಈ ಗೆಲುವಿಗೆ ಕಾರಣರಾಗಿದ್ದು ಕ್ಲೋಯ್ ಕೆಲ್ಲಿ. ಈಕೆ 110ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟರು. ಕಾರ್ನರ್ನಿಂದ ಬಂದ ಪಾಸ್ ಅನ್ನು ಕ್ಲೋಯ್ (Chloe Kelly) ಗೋಲ್ ಆಗಿ ಪರಿವರ್ತಿಸಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಮಾಡಿದರು. ಗೋಲು ದಾಖಲಾದ ಕೂಡಲೇ ಕ್ಲೋಯ್ ತನ್ನ ಟೀ ಶರ್ಟ್ ಕಳಚಿ ತನ್ನ ಸಹ ಆಟಗಾರರೊಂದಿಗೆ ಸಂತಸ ಹಂಚಿಕೊಂಡರು. ಇದನ್ನು ಓದಿ :-  ಭಾರತದ ಬುಟ್ಟಿಗೆ ಮೂರನೇ ಸ್ವರ್ಣ ಪದಕ – ಚಿನ್ನ ಗೆದ್ದ ವೇಯ್ಟ್ ಲಿಫ್ಟರ್ ಅಚಿಂತ್ಯ ಶಿವಲಿ

ಈಕೆಯನ್ನ ನೋಡಿದ ನೆಟ್ಟಿಗರು ನ್ಯಾಟ್ ವೆಸ್ಟ್ ಸರಣಿಯ ಫೈನಲ್ ವೇಳೆ ಟೀಂ ಇಂಡಿಯಾದ ಮಾಜಿ ನಾಯಕ ಗಂಗೂಲಿ ಅವರನ್ನು ನೆನಪಿಸಿಕೊಳ್ಳುತ್ತಿದ್ದರು. ಕ್ಲೋಯ್ ಕೆಲ್ಲಿ (Chloe Kelly)ಯ ಸಂಭ್ರಮಾಚರಣೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಕ್ಲೋಯ್ ಗೋಲು ಹೊಡೆದ ತಕ್ಷಣ, ಅವರು ರೆಫರಿಯತ್ತ ನೋಡಿದರು. ರೆಫರಿ ಗೋಲು ಮಾನ್ಯವೆಂದು ಘೋಷಿಸಿದ ತಕ್ಷಣ, ಅವರು ತನ್ನ ಟೀ-ಶರ್ಟ್ ತೆಗೆದು ಸಂತೋಷದಿಂದ ಮೈದಾನದಲ್ಲಿ ಜೆರ್ಸಿ ಹಿಡಿದು ಓಡಲು ಆರಂಭಿಸಿದರು. ಈ ಗೆಲುವಿನ ನಂತರವೂ ಕೆಲ್ಲಿ ತನ್ನ ಟೀ ಶರ್ಟ್ ಧರಿಸಿರಲಿಲ್ಲ. ಮ್ಯಾಂಚೆಸ್ಟರ್ ಸಿಟಿ ಪರ ಆಡುತ್ತಿರುವ ಕ್ಲೋಯ್ ಕೆಲ್ಲಿಯ ಮೊದಲ ಅಂತಾರಾಷ್ಟ್ರೀಯ ಗೋಲು ಇದಾಗಿದೆ. ಕೆಲ್ಲಿ ಅವರ ಗೋಲ್ ನೆರವಿನಿಂದ ಇಂಗ್ಲೆಂಡ್ ಚಾಂಪಿಯನ್ ಆಗಿದೆ.

ಇದನ್ನು ಓದಿ :- ಕಾಮನ್ ವೆಲ್ತ್ ಗೇಮ್ಸ್ 2022 – ಭಾರತಕ್ಕೆ ಎರಡನೇ ಚಿನ್ನ, ಜೆರೆಮಿ ಮುಡಿಗೆ ಬಂಗಾರ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!