ಬೆಂಗಳೂರಿ (Bengaluru) ನಲ್ಲಿ ಆರ್ ಟಿ ಓ ಕೋಟಿ ರೂಪಾಯಿಯ ವಂಚನೆಯ ಜಾಲ ಬಗೆದಷ್ಟು ಬಯಲಾಗ್ತಿದೆ. ನಕಲಿ ಚಲನ್ ಗಳನ್ನ ಅಪ್ಲೋಡ್ ಮಾಡಿ ಆರೋಪಿಗಳು ವಂಚನೆ ಮಾಡಿದ್ದಾರೆ. ರೋಡ್ ಟ್ಯಾಕ್ಸ್ ಕಟ್ಟದೇ 50 ಕೋಟಿಗೂ ಅಧಿಕ ಹಣವನ್ನು ಅಧಿಕಾರಿಗಳು ನುಂಗಿದ್ದಾರೆ. ಮಲ್ಲೇಶ್ವರಂ ಪೊಲೀಸರಿಂದ ಈ ಹಿಂದೆ ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದರು. ಚಿತ್ರ ನಟಿ ರಾಗಿಣಿ (Ragini) ಯ ಬಾಯ್ ಫ್ರೆಂಡ್ ರವಿಶಂಕರ್ ಹಾಗೂ ಅಜಯ್ ಅರೆಸ್ಟ್ ಆಗಿದ್ದರು.
ವಿಚಾರಣೆ ವೇಳೆ ರಾಗಿಣಿಯ ಬಾಯ್ ಫ್ರೆಂಡ್ ನಿಜ ಬಾಯಿಬಿಟ್ಟಿದ್ದಾನೆ. ಹಲವು ಆರ್ ಟಿ ಓ ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಹಣವನ್ನ ನುಂಗಿ ನೀರು ಕುಡಿದಿದ್ದಾರೆ. ಇದೀಗ ಮಲ್ಲೇಶ್ವರಂ ಪೊಲೀಸರು ಆರ್ ಟಿ ಓ ಅಧಿಕಾರಿಗಳ ವಿಚಾರಣೆಗೆ ಮುಂದಾಗಿದ್ದಾರೆ. ಕೋರಮಂಗಲ ಠಾಣೆಯಲ್ಲೂ ಹೊಸದೊಂದು ಎಫ್ ಐ ಆರ್ ದಾಖಲಾಗಿದೆ. ಡಾಟಾ ಎಂಟ್ರಿ ಆಪರೇಟರ್ ಸಂತೋಷನ ಹುಡುಕಾಟದಲ್ಲಿ ಕೋರಮಂಗಲ ಪೊಲೀಸರು ಮುಂದಾಗಿದ್ದಾರೆ. ಸಂತೋಷ ಕೋರಮಂಗಲ ಆರ್ ಟಿ ಓ ದಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ . 2015 ರಿಂದ 2019 ರ ವರೆಗೂ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಸದ್ಯದಲ್ಲೇ ಬಯಲಿಗೆ ಬರಲಿದೆ. ಇದೀಗ ನೂರಾರು ಕೋಟಿ ವಂಚನೆಯ ಜಾಡು ಹಿಡಿದು ಖಾಕಿ ಟೀಂ ಹೊರಟಿದೆ .
ಇದನ್ನು ಓದಿ :- ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಹಿನ್ನೆಲೆ -ಬಾಗಲಕೋಟೆಯಲ್ಲಿ KSRTC ಬಸ್ ಸಿಗದೆ ವಿದ್ಯಾರ್ಥಿಗಳ ಪರದಾಟ