ನಾನು ಸಾಮಾನ್ಯವಾಗಿ ಬರ್ತ್ ಡೇಯಲ್ಲಿ ಭಾಗಿಯಾಗಲ್ಲ. ಅದ್ರೆ ನನಗೂ ಸಿದ್ದರಾಮಯ್ಯ( siddaramiah ) ಗೂ ವಿಶೇಷ ಸಂಬಂಧವಿದೆ. ಹೀಗಾಗಿ ಸಿದ್ದರಾಮಯ್ಯ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದೇನೆ ಎಂದು ಕಾಂಗ್ರೆಸ್ ( congress) ಮುಖಂಡ ರಾಹುಲ್ ಗಾಂಧಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಹೇಳಿದ್ರು.
ಸಿದ್ದರಾಮಯ್ಯ ವಯಸ್ಸಾದಂತೆ ಯುವಕನಾಗಿ ಕಾಣುತ್ತಿದ್ದಾರೆ ಎಂದು ತಿಳಿಸಿದ್ರು. ಇವತ್ತು ಸಿದ್ದರಾಮಯ್ಯ , ಡಿಕೆಶಿ ಆಲಿಂಗನ ನೋಡಿ ನನಗೆ ತುಂಬಾ ಸಂತೋಷವಾಯಿತು. ಕರ್ನಾಟಕದಲ್ಲಿ ಡಿಕೆಶಿ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಅಭೂತಪೂರ್ವವಾಗಿ ಪಕ್ಷ ಸಂಘಟನೆ ಮಾಡ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಒಗ್ಗಟ್ಟಿನಿಂದ ಬಿಜೆಪಿ ( bjp )ಮತ್ತು ಆರ್ ಎಸ್ ಎಸ್ ನ್ನ ಸೋಲಿಸುವ ಶಕ್ತಿ ಪಡೆದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರತಿಯೊಬ್ಬ ಪ್ರಜೆಯ ಒಳಿತನ್ನು ಬಯಸುತ್ತದೆ ಎಂದು ಹೇಳಿದ್ರು. ಇದನ್ನು ಓದಿ : – ಉಪರಾಷ್ಟ್ರಪತಿ ಚುನಾವಣೆ- ಎನ್ ಡಿಎ ಅಭ್ಯರ್ಥಿ ಜಗದೀಪ್ ಧಂಕರ್ ಗೆ ಬಿಎಸ್ ಪಿ ಬೆಂಬಲ
ಬಸವಣ್ಣನ ಪ್ರತಿಮೆ ಮುಂದೆ ಪ್ರತಿಜ್ಞೆ ಮಾಡಿದ್ರೂ ಬಿಜೆಪಿಯವರು ಭ್ರಷ್ಚಾಚಾರದಲ್ಲಿ ತೊಡಗಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ ಸೇರಿದಂತೆ ಹಲವು ಭಾಗ್ಯಗಳನ್ನ ಸಿದ್ದರಾಮಯ್ಯ ನೀಡಿದ್ದಾರೆ. ನೋಟು ಅಮಾನ್ಯೀಕರಣ ಇವರ ದೊಡ್ಡ ಸಾಧನೆ. ಈ ಮೂಲಕ ರಾಷ್ಟ್ರದಲ್ಲಿ ಸಾಮಾನ್ಯ ಜನರು, ರೈತರನ್ನ ದಿಕ್ಕೆಡಿಸುವಂತೆ ಮಾಡಿದೆ. ಇದರಿಂದ ಬಡವರು ಬೀದಿಗೆ ಬಿದ್ರು. ಶ್ರೀಮಂತರು ಶ್ರೀಮಂತರಾದ್ರು. ಇದಾದ ಬಳಿಕ ಜಿ ಎಸ್ ಟಿ ಹೆಸರಿನಲ್ಲಿ ಮೋಸ ಮಾಡಿದ್ರು. ಬಡವರ, ರೈತರ, ಕಾರ್ಮಿಕರ ಜೀವನವನ್ನ ಜಿ ಎಸ್ ಟಿ ( gst ) ಹೆಸರಿನಲ್ಲಿ ನಾಶಗೊಳಿಸಿದ್ರು. ಜಿಎಸ್ ಟಿ ಮತ್ತು ನೋಟು ಅಮಾನ್ಯೀಕರಣದಿಂದ ಏನು ಲಾಭವಾಗಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ರು. ಇಂದಿರಾ ಕ್ಯಾಂಟೀನ್ ಯೋಜನೆ ಸೇರಿದಂತೆ ಹಲವು ಯೋಜನೆ ದೇಶಕ್ಕೆ ಮಾದರಿಯಾಗಿದೆ. ದೇಶದ ಸಂಪತ್ತನ್ನ ದೇಶದ ಕೃಷಿಕರಿಗೆ ಬಡವರಿಗೆ ನೀಡಿದೆ. ಆದ್ರೆ ಬಿಜೆಪಿ ಸಂಪತ್ತನ್ನ ಬಡವರು, ಕೃಷಿಕರಿಂದ ಕಿತ್ತುಕೊಳ್ಳುತ್ತಿದೆ ಎಂದು ಗುಡುಗಿದ್ರು. ಕೇವಲ 3-4 ಉದ್ಯಮಿಗಳಿಗೆ ಮಾತ್ರ ಬಿಜೆಪಿ ಸರ್ಕಾರ ಸಹಕರಿಸುತ್ತಿದೆ ಎಂದು ತಿಳಿಸಿದ್ರು.
ಇದನ್ನು ಓದಿ : – ಪ್ರವಾಹ ಪೀಡಿತ ಭಟ್ಕಳಕ್ಕೆ ಇಂದು ಸಿಎಂ ಬೊಮ್ಮಾಯಿ ಭೇಟಿ