ಎಲ್ಲರ ಮನವಿಗೆ ಮಣಿದು ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ. ನನ್ನ ಹುಟ್ಟುಹಬ್ಬಕ್ಕೆ ರಾಹುಲ್ ಗಾಂಧಿ ಬಂದಿದ್ದಕ್ಕೆ ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ( siddaramiah ) ಹೇಳಿದ್ರು.
ಸಿದ್ದರಾಮೋತ್ಸವದಲ್ಲಿ ಮಾತನಾಡಿದ ಸಿದ್ದರಾಮಯ್ಯ ನಾನು ಮುಖ್ಯಮಂತ್ರಿಯಾಗಿದ್ದಾಗ 5 ವರ್ಷಗಳ ಕಾಲ ಹೈಕಮಾಂಡ್ ನನಗೆ ಎಲ್ಲಾ ರೀತಿಯ ಬೆಂಬಲ ನೀಡಿದೆ. ನಾನು ಸಿಎಂ ಆಗಿದ್ದಾಗ ಜನಸೇವೆಯನ್ನ ಪ್ರಾಮಾಣಿಕವಾಗಿ ಮಾಡಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಶಕ್ತಿಯೇ ಬಹಳ ದೊಡ್ಡದು. ನನ್ನನ್ನು ಶಾಸಕನಾಗಿ, ಡಿಸಿಎಂ ಆಗಿ, ಸಿಎಂ ಆಗಿ ಮಾಡಿದ್ದಕ್ಕೆ ಕರ್ನಾಟಕದ ಜನತೆಗೆ ಧನ್ಯವಾದ ಎಂದು ತಿಳಿಸಿದ್ರು. ಇದನ್ನು ಓದಿ : – ದಾವಣಗೆರೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ – ಸಿದ್ದರಾಮಯ್ಯ ಹುಟ್ಟುಹಬ್ಬದಂದು ಅವರ ಬಗ್ಗೆ ಸ್ನೇಹಿತರು, ಸಹೋದ್ಯೋಗಿಗಳು ಹೇಳಿದ್ದೇನು ಗೊತ್ತಾ..?
ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರುವವರೆಗೆ ಸಕ್ರಿಯ ರಾಜಕಾರಣ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಘೋಷಿಸಿದ್ರು. ಸಿದ್ದರಾಮಯ್ಯ ಡಿಕೆಶಿ ಮಧ್ಯೆ ಬಿರುಕಿದೆ. ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಡಿ ಕೆ ಶಿ ವಿರೋಧವಿದೆ ಎಂದು ಹೇಳಿದ್ರು. ಇದು ಮಾಧ್ಯಮಗಳ ಸೃಷ್ಟಿ ಹಾಗೂ ಆಡಳಿತ ಪಕ್ಷಗಳ ಭ್ರಮೆ. ನಾನು ಶಿವಕುಮಾರ್ ಒಟ್ಟಾಗಿದ್ದೇವೆ ಎಂದು ದಾವಣಗೆರೆ ಸಿದ್ದರಾಮೋತ್ಸವದ ಮೂಲಕ ಸಂದೇಶ ರವಾನಿಸಿದ್ದಾರೆ.
ಇಷ್ಟೊಂದು ಭ್ರಷ್ಟ, ಕೋಮುವಾದಿ ಸರ್ಕಾರವನ್ನ ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ಕೋಮುವಾದಿ ಬಿಜೆಪಿಯನ್ನ ಕಿತ್ತೊಗೆದು ಮತ್ತೆ ಕಾಂಗ್ರೆಸ್ ಸರ್ಕಾರವನ್ನ ಅಧಿಕಾರಕ್ಕೆ ತರೋದಾಗಿ ಪ್ರತಿಜ್ಞೆ ಮಾಡುವಂತೆ ಸಿದ್ದರಾಮಯ್ಯ ಕರೆ ನೀಡಿದ್ರು. ದೇಶದಲ್ಲಿ ಸಂವಿಧಾನಕ್ಕೆ ಬೆಲೆಯೇ ಇಲ್ಲದಂತಾಗಿದೆ. ಮೋದಿ ಪ್ರಧಾನಿಯಾದ ಮೇಲೆ ದೇಶದ ಪರಿಸ್ಥಿತಿ ಹದಗೆಟ್ಟಿದೆ. ಬಿಜೆಪಿಯವರೇ, ನರೇಂದ್ರಮೋದಿಯವರೇ, ನೀವೂ ಎಂದೆಂದಿಗೂ ಕಾಂಗ್ರೆಸ್ ನ್ನ ಮುಗಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ರು.
2024 ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ರಾಹುಲ್ ಗಾಂಧಿ ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲು ಅರ್ಹ ವ್ಯಕ್ತಿ ಎಂದು ಹೇಳಿದ್ರು. ನೀವೂ ಪ್ರಧಾನಿಯಾದಾಗ 53 ಸಾವಿರ ಕೋಟಿ ಸಾಲ ಇತ್ತು. ಈಗ ದೇಶದ ಸಾಲ 155 ಲಕ್ಷ ಕೋಟಿಯಾಗಿದೆ. 8 ವರ್ಷದಲ್ಲಿ 102 ಲಕ್ಷ ಕೋಟಿ ಸಾಲ ಮಾಡಿದ್ದೀರಿ ಎಂದು ಮೋದಿ ( narendra modi ) ವಿರುದ್ಧ ವಾಗ್ದಾಳಿ ನಡೆಸಿದ್ರು. ಅಚ್ಚೇದಿನ್ ಬರುತ್ತೆ ಎಂದು ಹೇಳಿದ್ದೀರಿ. ಗ್ಯಾಸ್ ಬೆಲೆ 1ಸಾವಿರದ 100 ರೂಪಾಯಿ, ಪೆಟ್ರೋಲ್ ಡಿಸೇಲ್ ಬೆಲೆಯೂ ಗಗನಕ್ಕೇರಿದೆ. ಯಾಕೆ ಸುಳ್ಳು ಹೇಳ್ತಿದ್ದೀರಿ ಮೋದಿಯವರೇ ಎಂದು ಪ್ರಶ್ನಿಸಿದ್ರು. ರಾಜ್ಯದಲ್ಲಿರೋ ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರ ಎಂದು ಗುಡುಗಿದ್ರು.
ನೀವೂ ಒಂದೇ ಧರ್ಮಕ್ಕೆ ಸೀಮಿತವಾದ ಮುಖ್ಯಮಂತ್ರಿ ಬೊಮ್ಮಾಯಿಯವರೇ. ಪ್ರವೀಣ್ ಗೆ ಪರಿಹಾರ ನೀಡಿದ ನೀವೂ ಮಸೂದ್, ಪಾಝಿಲ್ ಕುಟುಂಬಕ್ಕೆ ಯಾಕೆ ಪರಿಹಾರ ನೀಡಿಲ್ಲ. ನೀವೂ ಈ ರಾಜ್ಯದ ಮುಖ್ಯಮಂತ್ರಿಯಾಗಕೆ ಲಾಯಕ್ಕಾ ಎಂದು ಪ್ರಶ್ನಿಸಿದ್ರು, ನೀವೂ ರಾಜೀನಾಮೆ ನೀಡಿ ಮನೆಗೆ ತೆರಳಿ ಎಂದು ಗುಡುಗಿದ್ರು. ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಮುಚ್ಚಿಹಾಕಿದ್ರಿ. ಜನಶಕ್ತಿ ಎದ್ದೇ ಏಳ್ತದೆ. ಈಗ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರಿಗೆ ಕಿರುಕುಳ ನೀಡುತ್ತಿದ್ರಿ. ಸೋನಿಯಾ ವಯಸ್ಸನ್ನ ಲೆಕ್ಕಿಸದೆ ಅವರನ್ನ ಇಡಿ ಕಚೇರಿ ಮುಂದೆ ನಿಲ್ಲುವಂತೆ ಮಾಡಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ರು. ದೇಶದಲ್ಲಿ ದ್ವೇಷದ ರಾಜಕೀಯ ಮಾಡುತ್ತಿದ್ದೀರಿ ಎಂದು ಕಿಡಿಕಾರಿದ್ರು.
ಇದನ್ನು ಓದಿ : – ಈ ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯೋಣ – ಡಿ ಕೆ. ಶಿವಕುಮಾರ್