ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ( commonwelth ) 2022 ಕೊನೆಗೂ ಮುಕ್ತಾಯಗೊಂಡಿದೆ. ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನಗಳನ್ನು ನೀಡಿ ಒಟ್ಟು 61 ಪದಕಗಳನ್ನು ಗೆದ್ದು, ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ವೇದಿಕೆಯಲ್ಲಿ 4ನೇ ಸ್ಥಾನ ಗಳಿಸುವಂತೆ ಮಾಡಿದ್ದಾರೆ.
ಈ ಬಾರಿ ಭಾರತ 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದು, ಇದು ಭಾರತದ ಕಾಮನ್ ವೆಲ್ತ್ ನ 5ನೇ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಹಿಂದೆ 2010ರಲ್ಲಿ ಭಾರತ 38 ಚಿನ್ನ ಸೇರಿದಂತೆ 101 ಪದಕಗಳನ್ನು ಗೆದ್ದು ಅತ್ಯುತ್ತಮ ಪ್ರದರ್ಶನ ನೀಡಿತ್ತು. ಮ್ಯಾಂಚೆಸ್ಟರ್-2002ರಲ್ಲಿ 69 ಪದಕ, ಗೋಲ್ಡ್ ಕೋಸ್ಟ್-2018ರಲ್ಲಿ 66 ಪದಕ ಹಾಗೂ ಗ್ಲಾಸ್ಗೋ-2014ರಲ್ಲಿ 64 ಪದಕಗಳನ್ನು ಭಾರತ ಪಡೆದಿತ್ತು. ಇದನ್ನೂ ಓದಿ : – ಇಂದು ಮಹಾರಾಷ್ಟ್ರ ಸಂಪುಟ ವಿಸ್ತರಣೆ – ಬೆಳಗ್ಗೆ 11 ಗಂಟೆಗೆ ನೂತನ ಸಚಿವರ ಪ್ರಮಾಣವಚನ
ಈ ಬಾರಿ ಆಸ್ಟ್ರೇಲಿಯಾ 67 ಚಿನ್ನದೊಂದಿಗೆ ಒಟ್ಟು 178 ಪದಕಗಳನ್ನು ಪಡೆದು ಪ್ರಥಮ ಸ್ಥಾನಕ್ಕೇರಿದೆ. ಇಂಗ್ಲೆಂಡ್ 57 ಚಿನ್ನದೊಂದಿಗೆ 176 ಪದಕಗಳನ್ನು ಪಡೆದರೆ, ಕೆನಡಾ 26 ಚಿನ್ನದೊಂದಿಗೆ ಒಟ್ಟು 92 ಪದಕಗಳನ್ನು ಪಡೆದಿದೆ. ಈ ಹಿಂದೆ ಶೂಟಿಂಗ್ ನಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆಲ್ಲುತ್ತಿದ್ದು, ಈ ಬಾರಿ ಕಾಮನ್ ವೆಲ್ತ್ ನಿಂದ ಅದನ್ನು ಕೈ ಬಿಡಲಾಗಿತ್ತು.
ಆದರೂ ಭಾರತ ಇತರ ಆಟಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಗ್ರ 5 ಸ್ಥಾನಗಳಲ್ಲೊಂದಾಗಲು ಸಾಧ್ಯವಾಯಿತು. ಕುಸ್ತಿಯಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆದ್ದಿದ್ದು, 12 ಪದಕಗಳನ್ನು ಬಾಚಿಕೊಂಡಿದೆ. ವೇಟ್ಲಿಫ್ಟಿಂಗ್ನಲ್ಲಿ 10 ಪದಕಗಳನ್ನು ಗೆದ್ದರೆ, ಟೇಬಲ್ ಟೆನ್ನಿಸ್ನಲ್ಲಿ 7 ಪದಕಗಳು ಭಾರತದ ಪಾಲಾಗಿದೆ.
ಇದನ್ನೂ ಓದಿ : – ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ- 100ಕ್ಕೆ 100 ಅಂಕ ಪಡೆದ 24 ಅಭ್ಯರ್ಥಿಗಳು