ಅಯೋಧ್ಯೆಯಲ್ಲಿ ನಡೆದಿರುವ ಭೂ ಅಕ್ರಮದಲ್ಲಿ ಬಿಜೆಪಿ ಶಾಸಕರ ವಿರುದ್ಧ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಅಯೋಧ್ಯೆ ಭೂ ಅಕ್ರಮ ವಿಚಾರವನ್ನ ಅಸ್ತ್ರವನ್ನಾಗಿ ಬಳಸಿಕೊಂಡ ಬಿಜೆಪಿ ( BJP )ವಿರುದ್ಧ ಸರಣಿ ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ( CONGRESS )ಆಕ್ರೋಶ ವ್ಯಕ್ತಪಡಿಸಿದೆ.
ರಾಮ ಮಂದಿರ( RAMA MANIDRA ) ದ ದೇಣಿಗೆಯಲ್ಲಿ ಅಕ್ರಮವೆಸಗಿದ್ದು ಬೆಳಕಿಗೆ ಬಂದಿತ್ತು, ಈಗ ಬಿಜೆಪಿಯವರ ಅಕ್ರಮ ಭೂ ವ್ಯವಹಾರವನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವೇ ಬಯಲು ಮಾಡಿದೆ. ಬಿಜೆಪಿಗೆ ದೇಶಭಕ್ತಿ, ಧರ್ಮಭಕ್ತಿಗಳು ವ್ಯಾಪಾರಕ್ಕೆ & ಭ್ರಷ್ಟಾಚಾರಕ್ಕೆ ಇರುವ ಟೂಲ್ ಕಿಟ್ ಗಳು. ರಾಮನ ಹೆಸರಿನ ಮರೆಯಲ್ಲಿ ಬಿಜೆಪಿ ಅಕ್ರಮ ನಡೆಸುವುದೇ ಬಿಜೆಪಿಯ ಅಸಲಿ ಮುಖ ಎಂದು ಕಿಡಿಕಾರಿದೆ. ಇದನ್ನೂ ಓದಿ : – ಮಳೆ ನಿಲ್ಲಿಸುವಂತೆ ಕೆಪಿಸಿಸಿ ವತಿಯಿಂದ ಕಿಗ್ಗಾದ ಶ್ರೀ ಋಷ್ಯ ಶೃಂಗೇಶ್ವರನಿಗೆ ವಿಶೇಷ ಪೂಜೆ
ಕಾಂಗ್ರೆಸ್ ಬೆಲೆ ಏರಿಕೆಯ ವಿರುದ್ಧದ ಪ್ರತಿಭಟನೆಯಿಂದ ರಾಮನಿಗೆ ಅವಮಾನ ಆಗಿದೆ ಎಂದು ಸಂಬಂಧವೇ ಇಲ್ಲದ ವಿಷಯಕ್ಕೆ ಸಂಬಂಧ ಕಲ್ಪಿಸಿದ ಅಮಿತ್ ಶಾ ಅವರಿಗೆ ಅವರ ಪಕ್ಷವೇ ಮಾಡಿದ ಈ ನೈಜ ಅವಮಾನ ತಿಳಿಯಲಿಲ್ಲವೇ? ರಾಮಜನ್ಮ ಭೂಮಿಯನ್ನು ‘ಬಿಜೆಪಿಯ ಭ್ರಷ್ಟಜನ್ಮಭೂಮಿ’ಯಾಗಿನ್ನಾಗಿಸಿದ್ದು ಸಮಸ್ತ ರಾಮಭಕ್ತರಿಗೆ ಹಾಗೂ ರಾಮನಿಗೆ ಮಾಡಿದ ಅವಮಾನ ಎಂದು ವಾಗ್ದಾಳಿ ನಡೆಸಿದೆ.
ದೇಶಭಕ್ತಿ ಹೆಸರಲ್ಲಿ ವ್ಯಾಪಾರ, ಧರ್ಮದ ಹೆಸರಲ್ಲಿ ಅಕ್ರಮ. ಇವೇ ಬಿಜೆಪಿ ಅಸಲಿ ಗುಣ. ಅಯೋಧ್ಯೆಯಲ್ಲಿ ಶಾಸಕ ಸೇರಿದಂತೆ ಬಿಜೆಪಿಯ 40 ಮಂದಿ ಅಕ್ರಮ ಭೂವ್ಯವಹಾರ ನಡೆಸಿದ್ದು ಹಿಂದೂ ಧರ್ಮಕ್ಕೆ ಎಸಗಿದ ಮಹಾದ್ರೋಹ. ಮರ್ಯಾದೆ ಬಿಟ್ಟಿರುವ ಬಿಜೆಪಿ ( bjp )ಮರ್ಯಾದಾ ಪುರುಷೋತ್ತಮನ ಮರ್ಯಾದೆ ಕಳೆಯುತ್ತಿರುವುದಕ್ಕೆ ರಾಮ ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ : – ಅಪ್ಪ ಬಿಜೆಪಿ – ಮಗ ಕಾಂಗ್ರೆಸ್..! ಶೀಘ್ರದಲ್ಲೇ ಕಾಂಗ್ರೆಸ್ ಸೇರುವೆ – ಪೂರ್ವಜ್ ವಿಶ್ವನಾಥ್