ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ( guru ragavendra ) ಸ್ವಾಮಿಯ ೩೫೧ನೇ ಆರಾಧನೆ ಅತ್ಯಂತ ವಿಜೃಂಭಣೆಯಿಂದ ನಡೆಯಿಯುತ್ತಿದೆ. ಇವತ್ತು ಪೂರ್ವಾರಾಧನೆ ಹಿನ್ನಲೆಯಲ್ಲಿ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಸಹಸ್ರಾರು ಭಕ್ತರು ಭಾಗಿಯಾಗಿ ರಾಯರ ಕೃಪರಗೆ ಪಾತ್ರರಾದರು.
ಇವತ್ತು ಕಲಿಯುಗದ ಕಾಮಧೇನು ರಾಯರ ಪೂರ್ವಾರಾಧನೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಪ್ರಾತಕಾಲದಲ್ಲಿ ಭಜನೆ, ಪ್ರವಚನಗಳ ಮೂಲಕ ಆರಂಭಗೊಂಡ ಪೂರ್ವಾರಾಧನೆಯಲ್ಲಿ ಮಠದ ಮುಖ್ಯ ಅರ್ಚಕರ ನೇತೃತ್ವದಲ್ಲಿ ಬೆಳಿಗ್ಗೆ ಬೃಂದಾವನ( brundhavana ) ಕ್ಕೆ ಪಂಚಾಮೃತಗಳ ಅಭಿಷೇಕ ಮಾಡಲಾಯ್ತು.. ಅದರಲ್ಲೂ ಈ ವರ್ಷ ತಮಿಳುನಾಡು ಸರ್ಕಾರದ ನಿರ್ದೇಶನ ಮೇರೆಗೆ ಮುಜರಾಯಿ ಇಲಾಖೆಯ ಅಧಿಕಾರಿಗಳು ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನ ಹಾಗೂ ಕುಂಬಕೋಣಂನ ಉಪ್ಪಲಿ ಅಪ್ಪನ್ ದೇವಾಲಯದಿಂದ ರಾಯರಿಗೆ ವಸ್ತ್ರ ರೂಪದ ಪ್ರಸಾದ ತೆಗೆದುಕೊಂಡು ಬಂದಿದ್ದರು. ಇದನ್ನು ಅರ್ಪಣೆ ಮಾಡಲಾಯ್ತು. ಇದನ್ನೂ ಓದಿ : – ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಸ್ತಾವನೆ ಇಲ್ಲ – ಜಗದೀಶ್ ಶೆಟ್ಟರ್
ತಮಿಳುನಾಡಿ( Thamilnadu ) ನ ಶ್ರೀರಂಗಂನಿಂದ ತಂದಿರುವ ವಸ್ತ್ರವನ್ನು ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ವಿವಿಧ ಕಲಾ-ತಂಡಗಳ ವಾದ್ಯಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದ್ರು. ಈ ವೇಳೆ ದೇಶದ ಮೂಲೆ ಮೂಲೆಗಳಿಂದ ಬಂದ ಭಕ್ತರು ಶ್ರೀಮಠದ ಪ್ರಾಂಗಣದಲ್ಲಿ ಉರುಳು ಸೇವೆ, ಹೆಜ್ಜೆ ಸೇವೆ ಸೇರಿದಂತೆ ನಾನಾ ಸೇವೆಗಳು ಸಲ್ಲಿಸಿ ರಾಯರ ಮೂಲ ಬೃಂದಾವನದ ದರ್ಶನ ಪಡೆದರು. ಇತ್ತ ಶ್ರೀಮಠದಿಂದ ಪ್ರಾಂಗಣದಲ್ಲಿ ರಾಯರು ರಚಿಸಿರುವ ಪರಿಮಳ ಗ್ರಂಥವನ್ನು ಪಲ್ಲಕ್ಕಿಯಲ್ಲಿ ಇಟ್ಟು ಪ್ರಾಂಗಣದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು.
ತದ ನಂತರ ಶ್ರೀ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರಿಗಳು ಬೃಂದಾವನದ ಸುತ್ತ ಪ್ರದಕ್ಷಿಣೆ ಹಾಕಿದ್ರು. ಇನ್ನು ಮಧ್ಯಾಹ್ನ ರಾಮದೇವರ ಪೂಜೆ ಹಾಗೂ ಮಹಾ ಪ್ರಸಾದ ವಿನಿಯೋಗ ನಡೆಯಿತು. ಈ ಅಭೂತ ಪೂರ್ವ ಪೂರ್ವಾರಾಧನಾ ಮಹೋತ್ಸವದಲ್ಲಿ ರಾಜ್ಯ ಸೇರಿದಂತೆ ಹೊರರಾಜ್ಯದ ಸಹಸ್ರಾರು ಭಕ್ತರು ಭಾಗಿಯಾಗಿ ರಾಯರ ಕೃಪೆಗೆ ಪಾತ್ರರಾದರು. ಬೃಂದಾವನದ ಸುತ್ತ ಉರುಳು ಸೇವೆ, ಪ್ರದಕ್ಷಿಣೆ ಹಾಕುವ ಮೂಲಕ ರಾಯರ ಸೇವೆ ಮಾಡಿ ಪುನೀತರಾದರು.
ಇದನ್ನೂ ಓದಿ : – ಶಿಕ್ಷಣ ಸಚಿವ ಬಿ ಸಿ ನಾಗೇಶ್ ವಜಾ ಮಾಡಬೇಕು – ಟ್ವಿಟ್ ಮೂಲಕ ಕಿಡಿಕಾರಿದ ‘ಕಾಂಗ್ರೆಸ್’