ಬೆಳಗಾವಿ (Belagavi) ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿರೋ ಗೊಡಚಿನಮಲ್ಕಿ ಫಾಲ್ಸ್ (Godachinamalki falls) ಮೈದುಂಬಿ ಹರಿಯುತ್ತಿದೆ. ಕಲ್ಲುಬಂಡೆಗಳ ಮೇಲೆ ಹಾಲ್ನೊರೆಯಂತೆ ಫಾಲ್ಸ್ ಉಕ್ಕಿ ಹರಿಯುತ್ತಿದೆ.
ಫಾಲ್ಸ್ ನೋಡಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಘಟಪ್ರಭಾ, ಮಾರ್ಕಂಡೇಯ ನದಿಯ ನೀರಿನ ಒಳಹರಿವು ಹೆಚ್ಚಳವಾಗಿದೆ.
ಚಿಕ್ಕಮಗಳೂರಿ (Chikkamagaluru) ನಲ್ಲಿ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿಯಿಂದ 10 ನೇ ತರಗತಿವರೆಗೆ ತಹಶೀಲ್ದಾರ್ ನಾಗರಾಜ್ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ರಜೆ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ : – ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ನೆರವೇರಿದ ರಾಯರ ಪೂರ್ವಾರಾಧನೆ
ಕಡೂರು ತಾಲೂಕಿನ ಐತಿಹಾಸಿಕ ಮದಗದ ಕೆರೆ ಏರಿಯಲ್ಲಿ ಭೂ ಕುಸಿತವಾಗಿದೆ. ಕೋಡಿ ಜಾಗ ಹಾಗೂ ಗುಡ್ಡದಲ್ಲೂ ಮಣ್ಣು ಕುಸಿದಿದೆ. ಮುಳ್ಳಯ್ಯನಗಿರಿಯಲ್ಲಿ ಭಾರೀ ಮಳೆ ಹಿನ್ನೆಲೆ ಕೆರೆಗೆ ಅಪಾರ ಪ್ರಮಾಣದ ನೀರು ಸೇರುತ್ತಿದೆ. ಏರಿ ಬಿರುಕು ಬಿಟ್ಟ ಹಿನ್ನೆಲೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಎದುರಾಗಿದೆ.
ಇದನ್ನೂ ಓದಿ : – ರಾಷ್ಟ್ರಧ್ವಜ ಲೋಪ ಎಸಗಿರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕು – ಪ್ರಹ್ಲಾದ್ ಜೋಶಿ