ಸ್ವಾತಂತ್ರ್ಯ ಬಂದು 25, 50 ವರ್ಷ ಆದಾಗ ಕಾಂಗ್ರೆಸ್ ನವರು ಹೇಗೆ ಆಚರಣೆ ಮಾಡಿದ್ರು . ಆದ್ರೆ ಈಗ 75 ವರ್ಷದ ಆಚರಣೆಯನ್ನ ನರೇಂದ್ರ ಮೋದಿ (Narendra modi) ಯವರು ಇಡೀ ರಾಷ್ಟ್ರವೇ ನೋಡುವಂತೆ ಮಾಡಿದ್ರು ಎಂದು ಆರ್. ಅಶೋಕ್ (R. Ashok) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ಧೀಮಂತ ನಾಯಕರು. ಸಿದ್ದರಾಮಯ್ಯ (Siddaramaiah) ಹೇಳ್ತಿದ್ರು ಸ್ವಾತಂತ್ರ್ಯ ನಾವು ತಂದು ಕೊಟ್ಟೆವು ಅಂತ. ಸಿದ್ದರಾಮಯ್ಯ ಅಂತು ತರಲಿಲ್ಲ, ಅವರದ್ದು ಈಗ ಮೂರನೇ ಪಾರ್ಟಿ. ಗರೀಬಿ ಹಠಾವೋ ಅಂದ್ರು, ಗರೀಬಿ ಹಠಾವೋ ಆಯ್ತಾ ಎಂದು ಪ್ರಶ್ನಿಸಿದ್ರು. ದೇಶಕ್ಕೆ ಅನೇಕ ಪ್ರಧಾನಿಯನ್ನ ಕೊಟ್ರು, ಲಾಲ್ ಬಹದ್ದೂರ್ ಶಾಸ್ತ್ರಿ ಬಿಟ್ರೆ ಯಾರು ಕೆಲಸ ಮಾಡಲಿಲ್ಲ. ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರನ್ನ ಪಾರ್ಲಿಮೆಂಟ್ ಗೆ ಬಿಡಲಿಲ್ಲ. ಅಂಬೇಡ್ಕರ್ ನಿಧನ ಹೊಂದಿದಾಗ ಮೂರಡಿ, ಆರಡಿ ಜಾಗ ಕೊಡಲಿಲ್ಲ ಎಂದು ಆರೋಪಿಸಿದ್ದಾರೆ . ಇದನ್ನೂ ಓದಿ : – ಒಂದು ಲಕ್ಷ ಜನ, ಒಂದು ಲಕ್ಷ ರಾಷ್ಟ್ರ ಧ್ವಜಗಳೊಂದಿಗೆ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ಶುರು !
ಇಂದು ಅವರ ಫೋಟೋ ಹಾಕ್ಕೋತಾರೆ. ಜನಗಳು ಅಂಬೇಡ್ಕರ್ ಫೋಟೋ ಹಾಕ್ಕೋಬೇಕು. ಅಂತಹ ಕೊಡುಗೆ ಕೊಟ್ಟಿದ್ದು ಪ್ರಧಾನಿ ಮೋದಿ. ಇಂದು ಅನೇಕ ದೇಶಗಳಾದ ಪಾಕಿಸ್ತಾನ, ಚೀನಾ ಯುದ್ದಕ್ಕೆ ಬಂದವು. ಈಗ ಪಾಕಿಸ್ತಾನ ಎಲ್ಲಿದೆ ನೋಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಎರಡೂ ಕೈನಲ್ಲಿ ತಿರಂಗ ಹಾರಿಸೋದು ಬಿಜೆಪಿ ಮಾತ್ರ. ಅಂತಹ ಶಿಸ್ತನ್ನ ಕಲಿಸಿಕೊಟ್ಟಿದ್ದು ನಮ್ಮ ಬಿಜೆಪಿ ಎಂದು ಆರ್. ಅಶೋಕ್ ತಿಳಿಸಿದ್ದಾರೆ.
ಇದನ್ನೂ ಓದಿ : – RSS ಗೆ ತ್ರಿವರ್ಣ ಧ್ವಜದ ಮೇಲೆ ಗೌರವವಿದೆ – ಆರಗ ಜ್ಞಾನೇಂದ್ರ