ಚಿಕ್ಕಬಳ್ಳಾಪುರ( chikkaballpuraa ) ದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಆಕಾಂಕ್ಷಿಗಳ ನಡುವೆ ಪೈಪೋಟಿ ತೀವ್ರಗೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಹಾಲಿ ಶಾಸಕ ವಿ ಮುನಿಯಪ್ಪ ಇರುವಾಗಲೇ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದೆ.
ಹೈಕಮಾಂಡ್ ಮನಗೆಲ್ಲಲು ಶಿಡ್ಲಘಟ್ಟದಲ್ಲಿ ರಾಜೀವ್ ಗೌಡ ಶಕ್ತಿ ಪ್ರದರ್ಶನ ಮಾಡಿದ್ದಾರೆ. 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸಂಗೊಳ್ಳಿರಾಯಣ್ಣ ಸರ್ಕಲ್ ನಿಂದ ಬಸವನಗುಡಿವಗರೆಗೂ ಕಾಂಗ್ರೆಸ್ ನ ಪಾದಯಾತ್ರೆಗೆ ಕಾರ್ಯಕರ್ತರನ್ನು ಕರೆದೊಯ್ಯಲು ಕೆಪಿಸಿಸಿ ( kpcc )ಕೋ ಆರ್ಡಿನೇಟರ್ ರಾಜೀವ್ ಗೌಡ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಬಾರಿ ಹಾಲಿ ಶಾಸಕ ವಿ ಮುನಿಯಪ್ಪ ಅವರಿಗೆ ಟಿಕೆಟ್ ತಪ್ಪುವ ಅವಕಾಶ ಇದೆ. ಇದನ್ನೂ ಓದಿ : – ಏಕಾಏಕಿ 6,500 ಮಂದಿ ವಜಾ- ಸರ್ಕಾರದ ವಿರುದ್ಧ ಸಿಡಿದೆದ್ದ ಬಿಸಿಯೂಟ ಕಾರ್ಯಕರ್ತೆಯರು, ಅಹೋರಾತ್ರಿ ಧರಣಿ
ಈ ಅವಕಾಶ ಬಳಸಿಕೊಳ್ಳಲು ಇಬ್ಬರು ಸಮಾಜ ಸೇವಕರ ನಡುವೆ ಪೈಪೋಟಿ ಏರ್ಪಟ್ಟಿದೆ, ಕಾಂಗ್ರೆಸ್ ಹೈಕಮಾಂಡ್ ಮನಗೆಲ್ಲಲು ರಾಜೀವ್ ಗೌಡ ( Rageev gowda ) ಶಿಡ್ಲಘಟ್ಟ ತಾಲೂಕಿನ ಪ್ರತಿ ಹಳ್ಳಿಯಿಂದ ಪಾದಯಾತ್ರೆಗೆ ಹೊರಡಲು 13000 ಜನಕ್ಕೆ ವಾಹನ ವ್ಯವಸ್ಥೆ ಕಲ್ಪಿಸಿದ್ರು. 200 ಬಸ್, 100 ಕಾರು ಸೇರಿದಂತೆ ,500 ಬೈಕ್ ಗಳ ವ್ಯವಸ್ಥೆ ಮಾಡಿ ತಮ್ಮ ಪ್ರಾಬಲ್ಯ ತೋರಿಸಿಕೊಂಡಿದ್ದಾರೆ.
ಇದನ್ನೂ ಓದಿ : – ಪಿಜ್ಜಾ ಹಿಟ್ಟಿನ ಮೇಲೆ ಶೌಚಾಲಯ ಬ್ರಷ್,ಪೊರಕೆ..! ಇದು ಬೆಂಗಳೂರಿನ ಡೊಮಿನೊಸ್ ಬ್ರಾಂಚ್ ಕರ್ಮಕಾಂಡ