ವಿಧಾನಸಭೆ ಚುನಾವಣೆ ತಯಾರಿಗೆ ಅಖಾಡಕ್ಕಿಳಿದ ಕಾಂಗ್ರೆಸ್

ಕಾಂಗ್ರೆಸ್ (CONGRESS) ಚುನಾವಣೆ ತಂತ್ರಗಾರಿಕೆಯ ನೀಲನಕ್ಷೆ (Blue Print) ಈಗಾಗಲೇ ರೆಡಿಯಾಗಿದೆ. 5 ಪ್ರಮುಖ ಅಂಶಗಳ ಬ್ಲ್ಯೂ ಪ್ರಿಂಟ್ ಅನ್ನು ಚುನಾವಣಾ ತಂತ್ರಗಾರಿಕಾ ತಂಡ ಕಾಂಗ್ರೆಸ್ ನಾಯಕರ ಮುಂದಿಟ್ಟಿದೆ. ರಣದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala) ನೇತೃತ್ವದ ಕಾಂಗ್ರೆಸ್ ನಾಯಕರ ಮುಂದೆ ನೀಲನಕ್ಷೆ ಬಿಚ್ಚಿಡಲಾಗಿದೆ.

ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರಚಾರದ ಸಿದ್ಧತೆ ಕುರಿತಂತೆ ಬ್ಲ್ಯೂ ಪ್ರಿಂಟ್ ರೆಡಿ ಮಾಡಿರುವ ಸುನಿಲ್ ಕನಗೋಳು ಹಾಗೂ ವಾರ್ ರೂಂ ಇನ್ ಚಾರ್ಜ್ ಸೆಂಥಿಲ್ ಪಿಪಿಟಿ ಪ್ರೆಸೆಂಟೇಷನ್ ಮಾಡಿದ್ದಾರೆ.
ಈ ನಡುವೆ ಬೆಂಗಳೂರಿನಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಕಚೇರಿಯನ್ನು ಉದ್ಘಾಟನೆ ಮಾಡಲಾಗಿದೆ. ರಣದೀಪ್ ಸಿಂಗ್ ಸುರ್ಜೇವಾಲ ಈ ಕಚೇರಿ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಹಿರಿಯ ಕಾಂಗ್ರೆಸ್ ನಾಯಕ ಹೆಚ್.ಕೆ. ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ : –  ಏಕಾಏಕಿ 6,500 ಮಂದಿ ವಜಾ- ಸರ್ಕಾರದ ವಿರುದ್ಧ ಸಿಡಿದೆದ್ದ ಬಿಸಿಯೂಟ ಕಾರ್ಯಕರ್ತೆಯರು, ಅಹೋರಾತ್ರಿ ಧರಣಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!