ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಕ್ಷೇತ್ರದಲ್ಲಿ ಲಕ್ಷ್ಮಣ್ ಸವದಿ ಸಕ್ರಿಯರಾಗಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ (Lakshman savadi) ಮತ್ತು ಕೊಳಚೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ ಕುಮಟಳ್ಳಿ (Mahesh kumatalli) ಮಧ್ಯೆ ಜಟಾಪಟಿ ನಡೆಯುತ್ತಿದೆ.
ಸವದಿ ನೇತೃತ್ವದ ಸರ್ಕಾರಿ ಕಾರ್ಯಕ್ರಮಕ್ಕೆ ಶಾಸಕ ಮಹೇಶ ಕುಮಟಳ್ಳಿ ಗೈರಾಗಿದ್ದಾರೆ. ಸವದಿ, ಕತ್ತಿ ಮತ್ತು ಜಾರಕಿಹೊಳಿ ಬಣದ ಮಧ್ಯೆ ಭಿನ್ನಮತ ಶುರುವಾಗಿದೆ. ಮಹೇಶ ಕುಮಟಳ್ಳಿ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದರು. ಈ ಭಿನ್ನಮತ ದಿನೇ ದಿನೇ ಹೆಚ್ಚುತ್ತಲೇ ಇದೆ. ಅಥಣಿ ಮತಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲು ಲಕ್ಷ್ಮಣ್ ಸವದಿ ಮುಂದಾಗಿದ್ದಾರೆ. 35 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಚಾಲನೆ ನೀಡಿದ್ದಾರೆ. ಇದನ್ನೂ ಓದಿ : – ಡಿ.ಕೆ.ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ- ಸೆ 27ಕ್ಕೆ ವಿಚಾರಣೆ ಮುಂದೂಡಿದ ED ಕೋರ್ಟ್
ಕಳೆದ ತಿಂಗಳು ನಡೆದ ಸಚಿವ ಮಾಧುಸ್ವಾಮಿ ಅವರ ಕಾರ್ಯಕ್ರಮಕ್ಕೂ ಶಾಸಕ ಕುಮಟಳ್ಳಿ ಗೈರಾಗಿದ್ದರು. ಬೆಂಬಲಿಗರು ಸಚಿವರ ಆಗಮನದ ಬ್ಯಾನರ್ ನಲ್ಲಿ ಲಕ್ಷ್ಮಣ ಸವದಿ, ಸವದಿ ಪುತ್ರ ಚಿದಾನಂದ ಪೋಟೋವನ್ನು ಮಾತ್ರ ಹಾಕಿದ್ದಾರೆ.
ಇದನ್ನೂ ಓದಿ : – ಸರ್ಕಾರ ವಿಸರ್ಜಿಸಿ ಚುನಾವಣೆಗೆ ಬನ್ನಿ – ಟ್ವೀಟ್ ಮೂಲಕ ಬಿಜೆಪಿ ಕಾಲೆಳೆದ ಕಾಂಗ್ರೆಸ್