ಇಂದು ಬ್ರಿಟನ್ ಮಹಾರಾಣಿ ಎಲಿಜಬೆತ್ ಅಂತ್ಯಕ್ರಿಯೆ – ವಿಶ್ವದ ಹಲವು ಗಣ್ಯರು ಭಾಗಿ

ಬ್ರಿಟನ್ ನ ದಿವಂಗತ ರಾಣಿ ಎಲಿಜಬೆತ್ ( elizibeath ) ಅಂತ್ಯಕ್ರಿಯೆ ಇಂದು ನಡೆಯಲಿದೆ. ಸುಮಾರು 4 ತಾಸುಗಳಷ್ಟು ಸುದೀರ್ಘ ಅವಧಿಗೆ ವಿವಿಧ ಧಾರ್ಮಿಕ ಹಾಗೂ ರಾಜಮನೆತನ ಶಿಷ್ಟಾಚಾರದ ವಿಧಿವಿಧಾನಗಳು ನೆರವೇರಲಿವೆ.

ಬ್ರಿಟನ್ ನಲ್ಲಿ 1965ರ ನಂತರ ಇದೇ ಮೊದಲ ಬಾರಿಗೆ ಸರ್ಕಾರಿ ಗೌರವಗಳೊಂದಿಗೆ ಗಣ್ಯರೊಬ್ಬರ ಅಂತ್ಯಸಂಸ್ಕಾರ ನಡೆಯುತ್ತಿದೆ. 2ನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್ ಸಾಮ್ರಾಜ್ಯವನ್ನು ಮುನ್ನಡೆಸಿದ್ದ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಅವರ ಅಂತ್ಯ ಸಂಸ್ಕಾರ 1965ರಲ್ಲಿ ನಡೆದಿತ್ತು. ಅಂದು ಸಹ ಬ್ರಿಟನ್ ನಲ್ಲಿ ಇದೇ ರೀತಿಯ ವಾತಾವರಣ ನಿರ್ಮಾಣವಾಗಿತ್ತು. ರಾಣಿ ಎಲಿಜಬೆತ್ ನಿಧನದ ನಂತರ ಬ್ರಿಟನ್ ಶೋಕಾಚರಣೆಯಲ್ಲಿತ್ತು. ಇಂದು ಮಹಾರಾಣಿಯ ಪಾರ್ಥಿವ ಶರೀರದ ಅಂತ್ಯಕ್ರಿಯೆಯೊಂದಿಗೆ ಬ್ರಿಟನ್ ನ 11 ದಿನಗಳ ರಾಷ್ಟ್ರೀಯ ಶೋಕಾಚರಣೆ ಅಂತ್ಯಗೊಳ್ಳಲಿದೆ. ರಾಜಮನೆತನಕ್ಕೆ ಸಂಬಂಧಿಸಿದ ಖಾಸಗಿ ವಿದ್ಯಮಾನವಾಗಿದ್ದರೂ, ಇದು ವಿಶ್ವಮಟ್ಟದಲ್ಲಿ ದೊಡ್ಡಸುದ್ದಿಯಾಗಿದೆ. ವಿಶ್ವದ ಬಹುತೇಕ ಎಲ್ಲ ಪ್ರಮುಖ ದೇಶಗಳ ನಾಯಕರು ಅಂತ್ಯಸಂಸ್ಕಾರದ ವೇಳೆ ದಿವಂಗತ ರಾಣಿ ಎಲಿಜಬೆತ್ ಗೆ ಅಂತಿಮ ನಮನ ಸಲ್ಲಿಸಲಿದ್ದಾರೆ.  ಇದನ್ನೂ ಓದಿ : –  ನೀವು ಬರಲಿಲ್ಲ ಅಂದರೆ ಸಿದ್ದರಾಮಯ್ಯ ಮರ್ಯಾದೆ ಹೋಗುತ್ತದೆ – ಡಿ.ಕೆ ಶಿವಕುಮಾರ್

ಬ್ರಿಟನ್ ನ ರಾಜಮನೆತನ, ರಾಜಕಾರಿಣಿಗಳು, ಮಿಲಿಟರಿ ಅಧಿಕಾರಿಗಳು, ನ್ಯಾಯಾಧೀಶರು ಮತ್ತು ದತ್ತಿ ಸಂಸ್ಥೆಗಳ ಪದಾಧಿಕಾರಿಗಳು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ರಿಟನ್ ನ ವಿವಿಧೆಡೆ ಇರುವ 125 ಚಿತ್ರಮಂದಿರಗಳಲ್ಲಿ ಅಂತ್ಯಕ್ರಿಯೆ ನೇರ ಪ್ರಸಾರವಾಗಲಿದೆ. ಪ್ರಮುಖ ಉದ್ಯಾನವನಗಳು, ಸರ್ಕಲ್ ಗಳು ಮತ್ತು ಕ್ಯಾಥೆಡ್ರೆಲ್ ಗಳಲ್ಲಿ ಅಂತ್ಯಸಂಸ್ಕಾರವನ್ನು ಸಾರ್ವಜನಿಕರು ನೋಡಬಹುದಾಗಿದೆ. ಇದಕ್ಕಾಗಿ ಬೃಹತ್ ಎಲೆಕ್ಟ್ರಿಕ್ ಪರದೆಗಳನ್ನು ಸ್ಥಾಪಿಸಲಾಗಿದೆ.

 ಇದನ್ನೂ ಓದಿ : –  ವಿಮ್ಸ್ ಘಟನೆ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚನೆ – ಡಾ ಸುಧಾಕರ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!