ಬರೋಬ್ಬರಿ 48 ಕೋಟಿ ಮೊತ್ತದ ಐಷಾರಾಮಿ ಅಪಾರ್ಟ್ ಮೆಂಟ್ ಖರೀದಿಸಿದ ಮಾಧುರಿ ದೀಕ್ಷಿತ್

ಭಾರತೀಯ ಚಿತ್ರರಂಗದ ಬ್ಯೂಟಿ ಕ್ವೀನ್ ಮಾಧುರಿ ದೀಕ್ಷಿತ್ ( madhuri dixith ) ಇತ್ತೀಚೆಗೆ ಮುಂಬೈನ ವರ್ಲಿಯಲ್ಲಿ 48 ಕೋಟಿ ರೂ. ಬೆಲೆ ಬಾಳುವ ಐಷಾರಾಮಿ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ.

ಭಾರತೀಯ ಚಿತ್ರರಂಗದ ಬ್ಯೂಟಿ ಕ್ವೀನ್ ಮಾಧುರಿ ದೀಕ್ಷಿತ್ ( madhuri dixith ) ಇತ್ತೀಚೆಗೆ ಮುಂಬೈನ ವರ್ಲಿಯಲ್ಲಿ 48 ಕೋಟಿ ರೂ. ಬೆಲೆ ಬಾಳುವ ಐಷಾರಾಮಿ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ.

ಆಸ್ತಿಯು ಇಂಡಿಯಾ ಬುಲ್ಸ್ ಬ್ಲೂ ಯೋಜನೆಯಲ್ಲಿ ಖರೀದಿಸಲಾಗಿದ್ದು, ಸೆಪ್ಟೆಂಬರ್ 8 ರಂದು ನೋಂದಾಯಿಸಲಾಗಿದೆ. ಐವತ್ತ ಮೂರನೇ ಮಹಡಿಯಲ್ಲಿರುವ ಅಪಾರ್ಟ್ಮೆಂಟ್ ನ ಪ್ರದೇಶವು 5,384 ಚದರ ಅಡಿ ಇದ್ದು, ಅಪಾರ್ಟ್ಮೆಂಟ್ ಏಳು ಕಾರ್ ಪಾರ್ಕಿಂಗ್ ಹೊಂದಿದೆ. Zapkey.com ಮೂಲಕ ಪ್ರವೇಶಿಸಿದ ದಾಖಲೆಗಳ ಪ್ರಕಾರ ಅಪಾರ್ಟ್ಮೆಂಟ್ ನ ಮಾರಾಟಗಾರರು ಕ್ಯಾಲೀಸ್ ಲ್ಯಾಂಡ್ ಡೆವಲಪ್ಮೆಂಟ್ ಪ್ರೈ ವೇಟ್ ಲಿಮಿಟೆಡ್.
ಇಂಡಿಯಾ ಬುಲ್ಸ್ ಬ್ಲೂ ವೆಬ್ ಸೈಟ್ ನ ಪ್ರಕಾರ, ಅಪಾರ್ಟ್ ಮೆಂಟ್ ಅರೇಬಿಯನ್ ಸಮುದ್ರದ ಅದ್ಭುತ ನೋಟವನ್ನು ಹೊಂದಿದೆ. ಇದನ್ನೂ ಓದಿ :-  ನಂದಿ ಧ್ವಜ ಪೂಜೆಯಲ್ಲಿ ಭಾಗಿಯಾದ ಸಿಎಂ ಬೊಮ್ಮಾಯಿ

ಇಂಡಿಯಾಬುಲ್ಸ್ ಬ್ಲೂ ತನ್ನ ಇನ್ ಸ್ಟಾ ಗ್ರಾಮ್ ನಲ್ಲಿ ಆಸ್ತಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಇದು ಸುಂದರವಾದ ಈಜುಕೊಳ, ಫುಟ್ಬಾಲ್ ಮೈದಾನ, ಟೆನ್ನಿಸ್ ಕೋರ್ಟ್, ಸ್ಕ್ವಾಷ್ ಕೋರ್ಟ್, ಬ್ಯಾಡ್ಮಿಂಟನ್ ಕೋರ್ಟ್, ಜಿಮ್ ಮತ್ತು ಕ್ರಿಕೆಟ್ ನೆಟ್ ಅನ್ನು ಹೊಂದಿದೆ.

ಇದನ್ನೂ ಓದಿ :- ನಾಳೆ ಭಾರತ್ ಜೋಡೋ ಯಾತ್ರೆಗೆ ಸೋನಿಯಾಗಾಂಧಿ ಎಂಟ್ರಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!