ಪಾಕಿಸ್ತಾನ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden ) ಹೇಳಿದ್ದಾರೆ. ಪಾಕಿಸ್ತಾನದ ವಿರುದ್ಧ ಅಮೆರಿಕದ ನಾಯಕರೊಬ್ಬರು ಈ ರೀತಿಯ ಬಹಿರಂಗ ಹೇಳಿಕೆ ನೀಡಿರುವುದು ಅಪರೂಪದ ಸನ್ನಿವೇಶವಾಗಿದೆ. ಇದು ಪಾಕಿಸ್ತಾನದ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರತದ ನಿಲುವಿಗೆ ಶಕ್ತಿ ಬಂದಂತಾಗಿದೆ.
ಚೀನಾ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸಂಬಂಧಿಸಿದಂತೆ ಅಮೆರಿಕದ ನೀತಿಗಳ ಕುರಿತು ಮಾತನಾಡಿದ ಬೈಡನ್, ಜಗತ್ತಿನಲ್ಲಿನ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಪಾಕ್ ಒಂದು ಎಂದು ಪಾಕಿಸ್ತಾನವನ್ನು ತಾವು ಪರಿಗಣಿಸಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ :- ಸೋರುತಿಹುದು ಕಾಂಗ್ರೆಸ್ ಮನೆಯ ಮಾಳಿಗೆ – ಸಚಿವ ಆರ್.ಅಶೋಕ್ ವ್ಯಂಗ್ಯ
“ಇಲ್ಲೊಬ್ಬ ವ್ಯಕ್ತಿ (ಕ್ಸಿ ಜಿನ್ಪಿಂಗ್) ತನಗೆ ಏನು ಬೇಕು ಎಂದು ಅರ್ಥಮಾಡಿಕೊಳ್ಳುತ್ತಾನೆ. ಆದರೆ ಆತ ವಿಪರೀತ ಸಮಸ್ಯೆಗಳ ಪಟ್ಟಿಯನ್ನೇ ಹೊಂದಿದ್ದಾನೆ. ಅದನ್ನು ನಾವು ಹೇಗೆ ನಿಭಾಯಿಸುವುದು? ರಷ್ಯಾದಲ್ಲಿ ನಡೆಯುತ್ತಿರುವುದಕ್ಕೆ ಸಂಬಂಧಿಸಿರುವ ಅದನ್ನು ನಾವು ಹೇಗೆ ನಿಭಾಯಿಸುವುದು? ಹಾಗೆಯೇ, ನನ್ನ ಪ್ರಕಾರ ಜಗತ್ತಿನ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಇದೂ ಒಂದು. ಪಾಕಿಸ್ತಾನ. ಯಾವುದೇ ಸಹಮತಗಳಿಲ್ಲದೆ ಪರಮಾಣು ಅಸ್ತ್ರಗಳನ್ನು ಹೊಂದಿದೆ” ಎಂದು ಬೈಡನ್ ಹೇಳಿದ್ದಾರೆ.
ಇದನ್ನೂ ಓದಿ :- ಸ್ಟೀಲ್ ಬ್ರಿಡ್ಜ್ ಗೆ ಬಿಜೆಪಿಯವರೇ ವಿರೋಧಿಸಿದ್ರು – ಹೆಚ್.ಡಿ ಕುಮಾರಸ್ವಾಮಿ