ದೇಶದಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ

ದೇಶದಲ್ಲಿ ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ( naredra modi ) ಅವರು ಇಂದು ದೇಶಾದ್ಯಂತ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ ಚಾಲನೆ ನೀಡಿದ್ದಾರೆ. ಡಿಬಿಯು ಗ್ರಾಹಕರಿಗೆ ಕಾಗದರಹಿತ, ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಸೈಬರ್ ಸುರಕ್ಷತೆ ಕುರಿತು ಆರ್ಥಿಕ ಸಾಕ್ಷರತೆ ಮತ್ತು ಗ್ರಾಹಕರಿಗೆ ಶಿಕ್ಷಣವನ್ನು ಹರಡುತ್ತವೆ. ದೇಶಾದ್ಯಂತ ಈ ಆರ್ಥಿಕ ವರ್ಷದಲ್ಲಿ ಡಿಬಿಯುಗಳ ಸ್ಥಾಪನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದರು.

ಡಿಬಿಯು ಡಿಜಿಟಲ್ ಬ್ಯಾಂಕಿಂಗ್ ಸವಲತ್ತುಗಳನ್ನು ಒದಗಿಸುತ್ತಿದ್ದು, ಉಳಿತಾಯ ಖಾತೆ ತೆರೆಯುವುದು, ಬ್ಯಾಲೆನ್ಸ್-ಚೆಕ್, ಪ್ರಿಂಟ್ ಪಾಸ್ಬುಕ್, ಹಣ ವರ್ಗಾವಣೆ, ಸ್ಥಿರ ಠೇವಣಿಗಳಲ್ಲಿ ಹೂಡಿಕೆ, ಸಾಲದ ಅರ್ಜಿಗಳು, ನೀಡಿದ ಚೆಕ್ ಗಳಿಗೆ ಪಾವತಿಯನ್ನು ನಿಲ್ಲಿಸುವ ಸೂಚನೆಗಳು, ಕ್ರೆಡಿಟ್/ಡೆಬಿಟ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ, ಖಾತೆಯ ವಿವರ ನೋಡುವುದು , ತೆರಿಗೆಗಳನ್ನು ಪಾವತಿ, ಬಿಲ್ಗಳನ್ನು ಪಾವತಿ ಮೊದಲಾದ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುತ್ತವೆ. ಇದನ್ನೂ ಓದಿ :- ಎಲ್ಲರು ನನಗೆ ಬೆಂಬಲಿಸಿ ನಾನು ಕೆಳಮಟ್ಟದ ದಿಂದ ಬಂದವನು – ಮಲ್ಲಿಕಾರ್ಜುನ ಖರ್ಗೆ


75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಮಾತನಾಡಿದ ಮೋದಿ, ನಾವು ಏಕಕಾಲದಲ್ಲಿ ಎರಡು ವಿಷಯಗಳಲ್ಲಿ ಕೆಲಸ ಮಾಡಿದ್ದೇವೆ. ಮೊದಲನೆಯದಾಗಿ, ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಧಾರಿಸುವುದು, ಅದನ್ನು ಬಲಪಡಿಸುವುದು ಮತ್ತು ಪಾರದರ್ಶಕತೆ ತರುವುದು. ಎರಡನೆಯದಾಗಿ, ನಾವು ಆರ್ಥಿಕತೆಯನ್ನು ಒಳಗೊಳ್ಳುವ ಕೆಲಸ ಮಾಡಿದ್ದೇವೆ. ಡಿಜಿಟಲೀಕರಣದ ಮೂಲಕ ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸುವಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ತಂತ್ರಜ್ಞಾನ ಕ್ಷೇತ್ರದ ಅತ್ಯಂತ ಯಶಸ್ವಿ ವ್ಯಕ್ತಿಗಳು, ಟೆಕ್ ಪ್ರಪಂಚದ ತಜ್ಞರು ಸಹ ಭಾರತದಲ್ಲಿ ಈ ವ್ಯವಸ್ಥೆಯನ್ನು ಶ್ಲಾಘಿಸುತ್ತಿದ್ದಾರೆ. ಅದರ ಯಶಸ್ಸಿನಿಂದ ಅವರೂ ಅಚ್ಚರಿಗೊಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ :- ಕಾಂಗ್ರೆಸ್ ನ ಪಾದಯಾತ್ರೆ ಕೇವಲ ಡಿಕೆಶಿ ಮತ್ತು ಸಿದ್ದರಾಮಯ್ಯನವರನ್ನು ಜೋಡಿಸುವ ಯಾತ್ರೆಯಾಗಿದೆ – ಅರುಣ್ ಸಿಂಗ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!