ಅಮೆರಿಕದ ಏರ್ ಶೋ ವೇಳೆ 2ನೇ ವಿಶ್ವಯುದ್ಧ ಕಾಲದ ವಿಮಾನಗಳು ಪರಸ್ಪರ ಡಿಕ್ಕಿ – ಮೂವರ ಸಾವು

ಎರಡನೇ ವಿಶ್ವಯುದ್ಧದ ಸ್ಮರಣಾರ್ಥಕವಾಗಿ ನ.12 ನಡೆದ ವೈಮಾನಿಕ ಪ್ರದರ್ಶನದಲ್ಲಿ 2ನೇ ವಿಶ್ವಯುದ್ಧ ಕಾಲದ 2 ವಿಮಾನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟ ಘಟನೆ ಅಮೆರಿಕದ ಟೆಕ್ಸಾಸ್ ನಗರದ ಬಳಿ ನಡೆದಿದೆ.

ಎರಡನೇ ವಿಶ್ವಯುದ್ಧದ ಸ್ಮರಣಾರ್ಥಕವಾಗಿ ನ.12 ನಡೆದ ವೈಮಾನಿಕ ಪ್ರದರ್ಶನದಲ್ಲಿ 2ನೇ ವಿಶ್ವಯುದ್ಧ ಕಾಲದ 2 ವಿಮಾನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟ ಘಟನೆ ಅಮೆರಿಕದ ಟೆಕ್ಸಾಸ್ ನಗರದ ಬಳಿ ನಡೆದಿದೆ. ಹಾಗೂ ಇನ್ನೊಂದೆಡೆ ಇನ್ನೂ ಕೆಲ ಸಿಬ್ಬಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಬೋಯಿಂಗ್ ಬಿ-17 ಫ್ಲೈಯಿಂಗ್ ಫೋರ್ಟ್ರೆಸ್ ಬಾಂಬರ್ ಮತ್ತು ಬೆಲ್ ಪಿ-63 ಕಿಂಗ್ಕೋಬ್ರಾ ಎಂಬ ಎರಡನೇ ವಿಶ್ವಯುದ್ಧ ಕಾಲದ 2 ಯುದ್ಧವಿಮಾನಗಳು ಡಲ್ಲಾಸ್ ಎಕ್ಸಿಕ್ಯೂಟಿವ್ ಏರ್ ಪೋರ್ಟ್ ನಲ್ಲಿ ನಡೆದ ಏರ್ ಶೋ ನಲ್ಲಿ ಭಾಗಿಯಾಗಿದ್ದವು. ಆದ್ರೆ ಮಧ್ಯಾಹ್ನ ಸುಮಾರಿಗೆ ಪ್ರದರ್ಶನದ ವೇಳೆ ಎರಡೂ ಯುದ್ಧವಿಮಾನಗಳ ವಿಂಗ್ಸ್ ತಗುಲಿ ಅವಘಡ ಸಂಭವಿಸಿದೆ ಎಂದು FAA ತಿಳಿಸಿದೆ. ಘಟನೆ ಬಳಿಕ ತುರ್ತು ಘಟಕ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದು ಘಟನೆ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಇಬ್ಬರ ಮೃತ ದೇಹ ಪತ್ತೆಯಾಗಿರುವ ಮಾಹಿತಿ ಸಿಕ್ಕಿದ್ದು ಇನ್ನಷ್ಟು ಸಿಬ್ಬಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : – ಕರ್ನಾಟಕದಲ್ಲಿ ಇಂದಿನಿಂದ 3 ದಿನ – ಹಳದಿ ಅಲರ್ಟ್ ಘೋಷಣೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!